ಪ್ರಧಾನಿಗೆ ಬಿಜೆಪಿ ಮುಖಂಡರಿಂದ ಸ್ವಾಗತ

ಬೀದರ್: ಎ.29:ಹುಮನಾಬಾದ್ ತಾಲ್ಲೂಕಿನಲ್ಲಿ ಆಯೋಜಿಸಿದ್ದ ವಿಧಾನಸಭೆ ಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ಇಲ್ಲಿಯ ವಾಯುಪಡೆ ತರಬೇತಿ ಕೇಂದ್ರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.

ಮುಖಂಡರು ಕೈಜೋಡಿಸಿ ನಮಸ್ಕರಿಸಿ ಪ್ರಧಾನಿ ಅವರಿಗೆ ಸ್ವಾಗತ ಕೋರಿದರು. ಅದಕ್ಕೆ ಪ್ರತಿಯಾಗಿ ಪ್ರಧಾನಿ ಅವರೂ ಕೈಮುಗಿದು ನಮಸ್ಕರಿಸಿ, ಧನ್ಯವಾದ ಅರ್ಪಿಸಿದರು.

ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಬಿಡಿಎ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಬಾಬುರಾವ್ ಮದಕಟ್ಟಿ, ಎನ್.ಆರ್. ವರ್ಮಾ, ಗುರುನಾಥ ಕೊಳ್ಳೂರ, ಶಿವರಾಜ ಕುದರೆ, ಮಹೇಶ ಪಾಲಂ, ಚಂದ್ರಕಲಾ ವಿಶ್ವಕರ್ಮ, ಹಣಮಂತ ಬುಳ್ಳಾ, ರಾಜು ಚಿದ್ರಿ, ಗುರುನಾಥ ಜ್ಯಾಂತಿಕರ್, ಬಸವರಾಜ ಪವಾರ್, ಸುರೇಶ ಮಾಶೆಟ್ಟಿ ಮೊದಲಾದವರು ಇದ್ದರು.

ಬಳಿಕ ಪ್ರಧಾನಿ ಅವರು ಹೆಲಿಕಾಪ್ಟರ್‍ನಲ್ಲಿ ಹುಮನಾಬಾದ್‍ಗೆ ತೆರಳಿದರು.