ಪ್ರಧಾನಿಗಳ ಸಂದೇಶಗಳನ್ನು ಪಾಲಿಸಿದರೆ ಸುಭದ್ರ ಆಡಳಿತ ನಡೆಸಲು ಸಾಧ್ಯ: ಮುತ್ತು ಶಾಬಾದಿ

ಸಿಂದಗಿ, ಮೇ.31-ಜಗತ್ತಿನ ಎಲ್ಲ ದೇಶಗಳಿಗೆ ಪ್ರವಾಸ ಕೈಕೊಂಡು ಅಲ್ಲಿನ ಆಡಳಿತದ ಹಾಗೆ ಭಾರತ ದೇಶವನ್ನು ಒಳ್ಳೆಯ ಆಡಳಿತದೊಂದಿಗೆ ಮುನ್ನಡಿಸಿದ ಪ್ರಧಾನಿ ಮೋದಿಜಿಯವರು ಜನಪರ ಕಾಳಜಿಯೊಂದಿಗೆ 7 ವರ್ಷ ಆಡಳಿತ ಪೂರೈಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅವರ ಸಂದೇಶಗಳನ್ನು ಪಾಲಿಸಿದರೆ ಸುಭದ್ರ ಆಡಳಿತ ನಡೆಸಲು ಸಾಧ್ಯ ಎಂದು ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಸಂಚಾಲಕ ಮುತ್ತು ಶಾಬಾದಿ ಹೇಳಿದರು.
ಪಟ್ಟಣದಲ್ಲಿ ಸೇವಾಹಿ ಸಂಘಟನೆ ಎಂಬ ದೇಹಿ ವಾಕ್ಯದೊಂದಿಗೆ ….ವಿಜಯಪುರ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ವತಿಯಿಂದ ಸಿಂದಗಿ ಮಂಡಲದಲ್ಲಿ ನಿರಾಶ್ರಿತ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಏಳು ವರ್ಷ ಪೂರೈಸಿದ ಹಿನ್ನೆಲೆ ಸ್ವಂತ ಖರ್ಚಿನಿಂದ 50 ಕುಟುಂಬಗಳಿಗೆ ಹಾಲು, ಬಾಳೆಹಣ್ಣು. ಮಾಸ್ಕ. ಮತ್ತು ಕನೆರಿ ಸ್ವಾಮಿಜಿಯವರು ನೀಡಿದ ಉಚಿತ ಕರೊನ ಔಷಧಿಯನ್ನು ವಿತರಿಸಿ ಮಾತನಾಡಿದರು.
ಈ ಸಮಯದಲ್ಲಿ ರಾಜ್ಯ ಲಿಂಬೆ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ. ಬಿಜೆಪಿ ರಾಷ್ಟ್ರೀಯ ಸದಸ್ಯ ಶಂಬು ಕಕ್ಕಳಮೇಲಿ ಮಾತನಾಡಿ, ಕಳೇದ 2 ವರ್ಷಗಳಿಂದ ಇಡೀ ದೇಶವೇ ಕರೋನಾ ರೋಗಕ್ಕೆ ತತ್ತರಿಸಿ ಹೋಗಿದೆ ಇಂತಹ ಸಂದರ್ಭದಲ್ಲಿ ಜನರ ಹಿತ ಕಾಪಾಡಲು ಬೇರೆ ಬೇರೆ ದೇಶಗಳ ವಿಜ್ಞಾನಿಗಳ ಸಂಪರ್ಕ ಪಡೆದು ಅವರ ಸಲಹೆ ಮೆರೆಗೆ ದೇಶದ ಜನರಿಗೆ ಒಳ್ಳೆಯ ಆಡಳಿತ ನಡೆಸಿ ಕರೋನಾ ರೋಗಕ್ಕೆ ತುತ್ತಾದವರಿಗೆ ಆಶ್ರಯದಾತರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿ.ಎಸ್.ನಾಗೂರ, ಬಾಪುಗೌಡ ಬಿರಾದಾರ, ಶ್ರೀಶೈಲ ಯಳಮೇಲಿ, ಶಂಕರ ಗೌಂಡಿ, ರಾಮು ಗೌಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೊರೊನಾ ಮಹಾಮಾರಿ ಹೊಗಲಾಡಿಸಲು ಕೈಗೊಳ್ಳಬೇಕಾದ ಜಾಗೃತಿ ಕುರಿತು ಮುತ್ತು ಶಾಬಾದಿ, ಅಶೋಕ ಅಲ್ಲಾಪೂರ, ಶಂಬು ಕಕ್ಕಳಮೇಲಿ ಮಾತನಾಡಿದವರು