ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಸದ್ಭಳಕೆಗೆ ಕರೆ


ಸಂಜೆವಾಣಿ ವಾರ್ತೆ
ಸಂಡೂರು:ಸೆ: 4: ಸಂಡೂರು ತಾಲೂಕಿನಲ್ಲಿ ಒಟ್ಟು 12333 ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಫಲಾನುಭವಿಗಳಿದ್ದು ಈಗಾಗಲೇ 7130 ಫಲಾನುಭವಿಗಳು ತಮ್ಮ ಈ.ಕೆ.ವೈಸಿ ಮಾಡಿಸಿಕೊಂಡಿದ್ದು ಇನ್ನುಳಿದ 5103 ಫಲಾನುಭವಿಗಳು ತಕ್ಷಣ ಇದನ್ನು ಮಾಡುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕರಾದ ಮಂಜುನಾಥ ರಡ್ಡಿ ತಿಳಿಸಿದರು.
ಅವರು ಕೃಷಿ ಇಲಾಖೆಯ ಹಾಗೂ ಸರ್ಕಾರದ ಯೋಜನೆಯ ಮಾಹಿತಿ ನೀಡಿ ಈಗಾಗಲೇ ತಾಲೂಕಿನ ಸಂಡೂರು ಹೋಬಳಿಯಲ್ಲಿ 551, ಚೋರುನೂರು ಹೋಬಳಿಯಲ್ಲಿ 2510, ತೋರಣಗಲ್ಲು ಹೋಬಳಿಯಲ್ಲಿ 2042 ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳು ಈ.ಕೆ.ವೈ.ಸಿ. ಮಾಡಿಸುವುದು ಬಾಕಿ ಇದ್ದು ಸೆಪ್ಟಂಬರ್ 07ನೇ ತಾರೀಕಿನ ಒಳಗೆ ( ) ವೆಬ್ ಸೈಟನಲ್ಲಿ  ( ) ನಲ್ಲಿ ಈ.ಕೆ.ವೈ.ಸಿ. ಆಯ್ಕೆ ಮಾಡಿಕೊಂಡು ಆಧಾರ್ ಕಾರ್ಡನೊಂದಿಗೆ ನೋಂದನೆ ಮಾಡಿಸಿಕೊಳ್ಳಬೇಕು, ಒಂದು ವೇಳೆ ಆಧಾರ್ ಕಾರ್ಡಗೆ ಮೊಬೈಲ್ ನಂಬರ್ ಜೋಡಣೆಯಾಗದಿದ್ದಲ್ಲಿ ಹತ್ತಿರದ ಗ್ರಾಮ-1 ಅಥವಾ ನಾಗರೀಕಾ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಈ ಕುರಿತು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಪ್ರಚಾರ ಮಾಡುವ ಮೂಲಕ ಫಲಾನುಭವಿಗಳಾಗಲು ತಿಳಿಸಲಾಗಿದೆ. ಬಾಕಿ ಇರುವ ಫಲಾನುಭವಿಗಳು ಸಂಡೂರು ಹೋಬಳಿಯಲ್ಲಿ ದೌಲತ್‍ಪುರ -94, ತಾರಾನಗರ 87, ಭುಜಂಗನಗರ 77, ಯಶವಂತನಗರ 66, ಕೃಷ್ಣಾನಗರ 60, ಚೋರನೂರು ಹೋಬಳಿಯಲ್ಲಿ ಚೋರನೂರು 200, ಅಗ್ರಹಾರ 182, ಬಂಡ್ರಿ 181, ಜಿ.ಎಲ್.ಹಳ್ಳಿ 141, ಸಿ.ಕೆ.ಹಳ್ಳಿ 125, ಅಂಕಮನಾಳ್ 119, ಹುಲಿಕುಂಟಿ 114, ಜಿಗೇನಹಳ್ಳಿ 114, ತೋರಣಗಲ್ಲು ಹೋಬಳಿಯಲ್ಲಿ ದರೋಜಿ 329, ಎಸ್. ಬಸಾಪುರ 143, ಅಂತಾಪುರ 113, ಗುಂಡ್ಲಹಳ್ಳಿ 110, ತಾಳೂರು 103, ಬನ್ನಹಟ್ಟಿ 98, ಮೆಟ್ರಿಕಿ 95, ಅವಿನಮಡುಗು 81 ರೈತರು ಬಾಕಿ ಇದ್ದು ತಕ್ಷಣ ನೊಂದಾಯಿಸಿ ಕೊಂಡು ಯೋಜನೆಯ ಲಾಭ ಪಡದುಕೊಳ್ಳಲು ಕರೆನೀಡಿದರು.

Attachments area