ಪ್ರದೀಪ ಎಂಟಮಾನ ಕೊಲೆ ಪ್ರಕರಣಃ 8 ಜನರ ಬಂಧನ

ವಿಜಯಪುರ, ಡಿ.5-ಜಿಲ್ಲೆಯ ಆಲಮೇಲ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಪ್ರದೀಪ ಯಂಟಮಾನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನ ಆರೋಪಗಳ ಬಂಧಿಸಲಾಗಿದೆ.

ಮೊನ್ನೆ ರಾತ್ರಿ 1 ಗಂಟೆಗೆ ಆಲಮೇಲ ಪಟ್ಟಣದ ಗಣೇಶ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಲೆ ಮಾಡಲಾಗಿತ್ತು.

ಆಲಮೇಲ ನಿವಾಸಿ ರೌಡಿ ಶೀಟರ್ ಪ್ರದೀಪ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಪಟ್ಟಣ ಪಂಚಾಯತಿ ಎಲೆಕ್ಷನ್ ವಿಚಾರವಾಗಿ ಕೊಲೆ ನಡೆದಿತ್ತು. ಈ ಕುರಿತು ಆಲಮೇಲ ಪೆÇೀಲೀಸ್ ಠಾಣೆಯಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು ಈಗ ಅದರಲ್ಲಿ 9 ಜನರನ್ನು 24 ಗಂಟೆಯ ಒಳಗೆ ಬಂಧಿಸಿದ್ದಾರೆ.

ಭೀಮು ಮೇಲಿನಮನಿ, ಸಂಜು ಮೇಲಿನಮನಿ, ಗೌತಮ ಮೇಲಿನಮನಿ, ಮುತ್ತು ಮೇಲಿನಮನಿ, ಸಂಗಪ್ಪ ಮೇಲಿನಮನಿ, ಶಿವಪುತ್ರ ಮೇಲಿನಮನಿ, ವಿರೇಶ ಮೇಲಿನಮನಿ, ಸತೀಶ ಮೇಲಿನಮನಿ, ದೇವು ಮೇಲಿನಮನಿ ಬಂಧಿತ ಆರೋಪಿಗಳಾಗಿದ್ದಾರೆ.