
ಬೆಂಗಳೂರು,ಮೇ೨೨:ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯಸಮಗ್ರ ಬಲಿಜ ವೇದಿಕೆ ಒತ್ತಾಯಿಸಿದೆ.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಪರಿಪಾಲಿಸುವ ನಿಟ್ಟಿನಲ್ಲಿ ಗುರುತಿಸಿಕೊಂಡಿದೆ. ಎಲ್ಲ ಜಾತಿ-ಧರ್ಮಗಳಿಗೆ ಸಮಾನ ಅವಕಾಶ ಹಾಗೂ ನ್ಯಾಯವನ್ನು ಒದಗಿಸುತ್ತಿದೆ ಎಂದು ವೇದಿಕೆ ತಿಳಿಸಿದೆ.
ರಾಜ್ಯದಲ್ಲಿ ೫೫ ಲಕ್ಷಕ್ಕೂ ಅಧಿಕ ಬಲಿಜ ಜನಸಂಖ್ಯೆ ಇದೆ. ಕಾಂಗ್ರೆಸ್ ಪಕ್ಷ ನೀಡಿದ ಅವಕಾಶವನ್ನು ಪ್ರದೀಪ್ ಈಶ್ವರ್ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಲಿಜ ವೇದಿಕೆ ರಾಜ್ಯಾಧ್ಯಕ್ಷ ಮುನಿಕೃಷ್ಣಪ್ಪ ಆಗ್ರಹಿಸಿದ್ದಾರೆ. ಎಲ್ಲ ಜಿಲ್ಲೆ ಬಲಿಜ ಮುಖಂಡರು ಈ ಬೇಡಿಕೆಗೆ ಬೆಂಬಲಿಸಿ ನೇರವಾಗಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದೆಂದು ತಿಳಿಸಿದ್ದಾರೆ.
ಉಳಿದಂತೆ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ. ಶಿವಪ್ಪ, ಡಾ. ಕೃಷ್ಣಪ್ಪ, ನಾಗರಾಜು, ಬಾರಾಜು, ಕೃಷ್ಣಪ್ಪ ಕನಕಪುರ, ಜಯಕರ್‌ರಾವ್, ದೇವರಾಜು, ಕೊಂಡಪ್ಪ ಪಾವಘಡ ಸೇರಿದಂತೆ ಇತರ ಜಿಲ್ಲೆಗಳ ಮುಖಂಡರು ಮನವಿ ಮಾಡಿದ್ದಾರೆ.