ಪ್ರಥಮ ಸೆಮಿಸ್ಟರ ಪದವಿ ಪ್ರವೇಶಾತಿ ವಿಸ್ತರಿಸಲು ಮನವಿ

ಕಲಬುರಗಿ,ಅ.28- ಗುಲಬರ್ಗಾ ವಿಶ್ವವಿದ್ಯಾಲಯ ಬಿ.ಎ., ಬಿ.ಎಸ್ಸಿ., ಮತ್ತು ಬಿ.ಕಾಂ ಪ್ರಥಮ ಸೆಮಿಸ್ಟರ್ ಪ್ರವೇಶಾತಿ ಅವಧಿಯನ್ನು ವಿಸ್ತಿರುಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘ ಯಡ್ರಾಮಿ ಗ್ರಾಮ ಘಟಕಟ ನಿಯೋಗ ಕುಲಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಬಿ.ಎ., ಬಿ.ಎಸ್ಸಿ., ಮತ್ತು ಬಿ.ಕಾಂ ಪ್ರಥಮ ಸೆಮಿಸ್ಟರ್ ಪ್ರವೇಶಾತಿ ಅವಧಿ ಬಯಸುವ ವಿದ್ಯಾರ್ಥಿಗಳು ಪ್ರವೇಶಾತಿ ಗೊಂದಲದಿಂದ ಪ್ರವೇಶ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ವಿಫಲರಾಗಿದ್ದಾರೆ, ಕಾರಣ ಏಕರೂಪ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಮೆಡಿಕಲ್, ಇಂಜನಿಯರಿಂಗ್ ಪ್ರವೇಶ ಮಾದರಿಯಲ್ಲಿ ಇಲ್ಲಿಯೂ ನಡೆಯಬಹುದೆಂದು, ಭಾವಿಸಿ ಅಧಿಸೂಚನೆಗಾಗಿ ಕಾಯುತ್ತ ಕುಳಿತ್ತಿದ್ದಾರೆ.
ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಮುನಿಕೇಷನ್ ಗ್ಯಾಪ್‍ನಿಂದಾಗಿ ಪ್ರವೇಶ ಪಡೆಯಲು ಆಗಿಲ್ಲ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅತಂತ್ರವಾಗಿದೆ. ಮತ್ತು ಅವರ ಭವಿಷ್ಯಕ್ಕೆ ತೊಂದರೆಯುಂಟಾಗುತ್ತದೆ. ಅದಕ್ಕಾಗಿ ತಾವುಗಳು ಗ್ರಾಮೀಣ ಪ್ರೆದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದು ವಾರದ ವರೆಗೆ ಪ್ರವೇಶ ದಿನಾಂಕವನ್ನು ವಿಸ್ತರಿಸಿ ಮುಂದೂಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಸಂಘಟದ ನಿಯೋಗ ಮನವಿ ಸಲ್ಲಿಸಿದೆ.