
ಕಲಬುರಗಿ ಏ 15: ಯುಯುಸಿಎಮ್‍ಎಸ್ ನಿಂದಾಗಿ ಎನ್‍ಇಪಿ ಪ್ರಥಮ ಸೆಮಿಸ್ಟರಿನ ಪದವಿ ವಿದ್ಯಾರ್ಥಿಗಳ ಫಲಿತಾಂಶ ಗೊಂದಲಗಳನ್ನು ಈ ಕೂಡಲೇ ಬಗೆಹರಿಸಿ, ಕೂಡಲೇ ಫಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿ ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು
ಗುಲ್ಬರ್ಗ ವಿಶ್ವವಿದ್ಯಾಲಯದ, ಎಲ್ಲಾ ಪದವಿ ಪ್ರಸಕ್ತ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಹಿಂದಿನ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಇಲ್ಲಿಯವರೆಗೂ ಘೋಷಣೆ ಮಾಡದೆ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ. ಅಷ್ಟೇ ಅಲ್ಲದೆ ಇದೇ ಮಾರ್ಚ್ 20 ರಿಂದ 3ನೇ ಸೆಮಿಸ್ಟರ್ ಪರೀಕ್ಷೆಗಳ ದಿನಾಂಕ ಘೋಷಣೆಯೂ ಆಗಿದೆ. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಉತ್ತೀರ್ಣರಾಗಿದ್ದಾರೆ-ಅನುತ್ತೀರ್ಣರಾಗಿದ್ದರೆ ಎನ್ನುವುದು ಸಹ ತಿಳಿದಿಲ್ಲ. ಹೀಗಾಗಿ ಸಹಜವಾಗಿಯೇ ಫಲಿತಾಂಶ ಕುರಿತು ಆತಂಕಕ್ಕೆ ಒಳಗಾಗಿದ್ದಾರೆ. ಪದವಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪ್ರಥಮ ಸೆಮಿಸ್ಟರ್ ಫಲಿತಾಂಶವನ್ನು ಈ ಕೂಡಲೇ ಘೋಷಣೆ ಮಾಡಬೇಕು.ಅಲ್ಲಿಯವರೆಗೂ 3ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಬೇಕು ಎಂದು ಮನವಿ ಪತ್ರ್ರ ಸಲ್ಲಿಸಲಾಯಿತ್ತು. ಈ ನಿಯೋಗದಲ್ಲಿ ಸ್ನೇಹಾ ಕಟ್ಟಿಮನಿ, ತುಳಜರಾಮ ಎನ್.ಕೆ, ವೆಂಕಟೇಶ ದೇವದುರ್ಗ, ವಿದ್ಯಾರ್ಥಿಗಳಾದ ಪೂಜಾ, ನೆಹರು, ಪ್ರಕಾಶÀ, ಯುವರಾಜ ಹಾಗೂ ಇತರರಿದ್ದರು