ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ

ಕಲಬುರಗಿ,ಮಾ.21-ನಗರದ ಸರ್ಕಾರಿ ಸ್ವಾಯತ್ ಮಹಾವಿದ್ಯಾಲಂiÀiದ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗಿಯಿತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸವಿತಾ ತಿವಾರಿ ಅವರು ಮಾತನಾಡಿ, ಕಲಿಕೆಯಲ್ಲಿ ವಿದ್ಯಾರ್ಥಿಗಳ ಮನೋಭಾವ ಮತ್ತು ಆಸಕ್ತಿ ಯಾವ ರೀತಿ ಇರಬೇಕೆಂದು ಹೇಳಿಕೊಟ್ಟರು. ವಾಣಿಜ್ಯ ವಿಭಾಗದ ಡೀನ್ ರಾಜಕುಮಾರ್ ಸಲಗರ್ ಅವರು ಮಾತನಾಡಿ, ಚೀನಾದ ದೊಡ್ಡ ಉದ್ಯಮಿ ಗ್ರೇಟ್ ಜಾಕ್ಮಾ ಅವರ ಉದಾಹರಣೆ ನೀಡಿ ಹೊರ ಜಗತ್ತಿಗೆ ಕಾಮರ್ಸ್ ವಿದ್ಯಾರ್ಥಿಗಳಿಗೆ ಎಷ್ಟು ಬೇಡಿಕೆ ಇದೆ ಎಂಬುವುದನ್ನು ತಿಳಿಸಿಕೊಟ್ಟರು.
ಸಮಾರಂಭದಲ್ಲಿ ಅರುಣ್ ಕುಮಾರ್ ಸಲಗರ, ಸುಜಾತ ದೊಡ್ಡಮನಿ, ಶಶಿಕಾಂತ್ ಕೊಳ್ಳಿ, ವಿಜಯಕುಮಾರ್ ಸಾಲಿಮನಿ, ವಿಜಯ್ ಕುಮಾರ್, ಗೋಪಾಲ್, ರಾಬಿಯ ನಿಜಾಮುದ್ದೀನ್, ಗಿರಿರಾಜ್ ಪವರ್ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಇತರರಿದ್ದರು.