ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಪ್ರೋಗ್ರಾಮ್

ದಾವಣಗೆರೆ.ಸೆ.೨೦; ನಗರದ  ಜಿಎಂಎಸ್ ಅಕಾಡೆಮಿ ಫಸ್ಟ್ ಗ್ರೇಡ್ ಕಾಲೇಜ್ ವತಿಯಿಂದ  ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮವನ್ನು ಜಿಎಂ ಹಾಲಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ವರ್ಷದ ಬಿಸಿಎ, ಬಿಕಾಂ ಮತ್ತು  ಬಿಎಸ್ಸಿ ಪದವಿಗೆ ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಸ್ವಾಗತವನ್ನು ಕೋರಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ನಡೆಸಲ್ಪಟ್ಟಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧಾರವಾಡದ ಸಂತ ಜೋಸೆಫ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ ಆರೋಗ್ಯಸ್ವಾಮಿ ಕರಡಿ, ಸಿಸ್ತು, ಸಂಯಮ ಮತ್ತು ಬದ್ಧತೆ  ವಿದ್ಯಾರ್ಥಿಗಳಲ್ಲಿ ಇರಬೇಕಾದ ಈ ಮೂರು ಅಂಶಗಳು. ಇವುಗಳ ಮೂಲಕ ಏನನ್ನಾದರೂ ಸಾಧಿಸಬಹುದೆಂದು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿ ಜಿಎಂಐಟಿ ಎಂಬಿಎ ವಿಭಾಗದ ನಿರ್ದೇಶಕರಾದ ಡಾ ಬಕ್ಕಪ್ಪ ಮಾತನಾಡಿ, ಕಾಲೇಜಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಬುದ್ಧಿವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ಕರೆ ಕೊಟ್ಟರು. ಹಾಗೆಯೇ ಪ್ರಾಂಶುಪಾಲೆ ಶ್ರೀಮತಿ ಶ್ವೇತಾ ಮರಿಗೌಡರ್ ಅವರ ಕೆಲಸ ಮತ್ತು ದೂರ ದೃಷ್ಟಿಯನ್ನು ಶ್ಲಾಘಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ನಡೆದು ಬಂದ ಹಾದಿ ಮತ್ತು ಸಾಧನೆಗಳ ಬಗ್ಗೆ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾದ ವಿನಯ್ ಪಿ ಜೆ ವಿವರಿಸಿದರು. ಪ್ಲೇಸ್ಮೆಂಟ್ ವಿಭಾಗದ ವಿವರಣೆಯನ್ನು  ಶಾಂತಕುಮಾರ್ ಎ ಕೆ ಮತ್ತು ಹಾಸ್ಟೆಲ್ ವಿಭಾಗದ ವಿವರಣೆಯನ್ನು ವಾರ್ಡನ್  ಮಲ್ಲಿಕಾರ್ಜುನ್ ನೆರೆದಿದ್ದ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಜಿಎಂಎಸ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶ್ವೇತ ಮರಿಗೌಡರ್ ಸ್ವಾಗತ ಭಾಷಣವನ್ನು ಮತ್ತು  ಶಾಂತಕುಮಾರ್  ಎ ಕೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ತರಬೇತಿ ಮತ್ತು ಉದ್ಯೋಗ ವಿಭಾಗದ  ತೇಜಸ್ವಿ ಕಟ್ಟಿಮನಿ ಟಿ ಆರ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.