ಪ್ರಥಮ ವರ್ಷದ ಜನ್ಮದಿನಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಆ.೨; ನಗರದ ಅಭಿನವ ರೇಣುಕಾ ಮಂದಿರದಲ್ಲಿ ಆ.೪ ರಂದು‌ ಬೆಳಗ್ಗೆ ‌೧೦.೩೦ ಕ್ಕೆ ಬಿಜೆಪಿ ಯುವ ಮುಖಂಡ ಜಿ.ಎಸ್ ಶ್ಯಾಮ್ ಪುತ್ರ ರಾಜ್ ಶ್ಯಾಮ್ ಅವರ ಪ್ರಥಮ ವರ್ಷದ ಜನ್ಮದಿನವನ್ನು ವಿವಿಧ ಸಮಾಜಮುಖಿ‌ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸ್ನೇಹಜೀವಿ ಜಿ.ಎಸ್ ಶ್ಯಾಮ್ ಅಭಿಮಾನಿಗಳ ಬಳಗದ ಎಸ್.ಜಿ ಸೋಮಶೇಖರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ ಶ್ಯಾಮ್ ಜನ್ಮದಿನದ ಪ್ರಯುಕ್ತ ಸರ್ಕಾರಿ ಶಾಲೆಯ ೧೫೦ ರಿಂದ ೨೦೦ ವಿದ್ಯಾರ್ಥಿಗಳಿಗೆ ಪಠ್ಯಪರಿಕರಗಳನ್ನು ವಿತರಿಸಲಾಗುವುದು.ಈ ಸಮಾರಂಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮುಖಂಡರುಗಳು ಆಗಮಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸುನೀಲ್ ಕುಮಾರ್ ಪಾಮೇನಹಳ್ಳಿ,ಡಿ.ದೇವರಾಜ್,ಚೌಡೇಶ್ ಬಿ ಶಿಲ್ಪಿ ಉಪಸ್ಥಿತರಿದ್ದರು.