ಪ್ರಥಮ ವರ್ಷದ ಆರಾಧನೆ


ಗದಗ,ಜ.22: ತಾಲ್ಲೂಕಿನ ಹುಲಕೋಟಿ ಗ್ರಾಮದ ಸುರಭಿ ವೃದ್ಧಾಶ್ರಮದಲ್ಲಿ ಮೀನಾಕ್ಷಮ್ಮ ಬಿ.ಜಿ ಅವರ ಪ್ರಥಮ ವರ್ಷದ ಆರಾಧನೆಯನ್ನು ಸರಳ ರೀತಿಯಲ್ಲಿ ಮಾಡಲಾಯಿತು.
ಡಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ನಿವಾಸಿಯಾದ ಶ್ರೀಮತಿ ಮೀನಾಕ್ಷಮ್ಮ ಬಿ.ಜಿ ಅವರು ದಿ.ಗೌಡ್ರ ನಾಗೇಂದ್ರಪ್ಪ ಬಿ.ಜಿ ಇವರ ಧರ್ಮಪತ್ನಿ ಹಾಗೆಯ ಇವರು ಸುರಭಿ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷರು ಮತ್ತು ಸುರಭಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಂಕರಪಟೇಲ ಬಿ.ಜಿ ಇವರ ತಾಯಿ ಆಗಿದ್ದಾರೆ. ಇವರು ಎಲ್ಲಾ ಜಿಲ್ಲೆಗಳಲ್ಲಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದ ಲಕ್ಷಾಂತರ ಜನರು ಇವರಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಮತ್ತು ವೃದ್ಧಾಶ್ರಮದ ಹಿರಿಯ ಜೀವಿಗಳಿಗೆ ಒಂದು ಉತ್ತಮ ಬದುಕನ್ನು ಸಾಗಿಸಲು ಉದಾಹರಣೆಯಾಗಿದೆ.
ಹಲವಾರು ವೃದ್ಧಾಶ್ರಮ, ಮದ್ಯ ವ್ಯಸನಿಗಳ ಮುಕ್ತಿ ಕೇಂದ್ರ, ಉಜ್ವಲ, ಸ್ವಾಧಾರ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಒಳಗೊಂಡು ಒಳ್ಳೆಯ ಕೆಲಸವನ್ನು ಮಾಡುವುದರಲ್ಲಿ ಯಶಸ್ವಿಗೆ ಎಲ್ಲರ ಮನಸ್ಸಲ್ಲೂ ಚಿರಋಣಿಯಾಗಿದ್ದಾರೆ ಎಂದು ಸುರಭಿ ಕೇಂದ್ರ ಮೇಲ್ವಿಚಾರಕ ರಾಜು ಯಕ್ಲಾಸಪೂರ ಅವರು ಹೇಳಿದರು.