ಪ್ರಥಮ ರೋಜಾ ಪೂರ್ಣಗೊಳಿಸಿದ ಮಕ್ಕಳಿಗೆ ಸನ್ಮಾನ

ಸೈದಾಪುರ:ಮಾ.27:ಪಟ್ಟಣದ ಜಮಾ ಮಜೀದಿನಲ್ಲಿ ಮುಸ್ಲಿಂರ ಪವಿತ್ರ ದಿನ ರಂಜಾನ ನಿಮಿತ್ಯಾ 8 ವರ್ಷದ ಮುಸದ್ದಿಕ್ ಅಹ್ಮದ ಅಲ್ಲಾಭಾಷ ಹಾಗೂ 9 ವರ್ಷದ ಮನ್ನಾನ ಶೈಖ ನಿಜಾಮ ಪ್ರಥಮ ರೋಜಾ ಪೂರ್ಣಗೊಳಿಸಿದ್ದಕ್ಕಾಗಿ ಧರ್ಮಗುರು ಮುಸ್ತಾಕ ಆಲಂ ಸನ್ಮಾನಿಸಿ ನಂತರ ಮಾತನಾಡಿದ ಅವರು, ಮಕ್ಕಳು ಎಲ್ಲರ ಒಳತಿಗಾಗಿ ಉಪವಾಸ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆರೋಗ್ಯದೊಂದಿಗೆ ನಾವು ರೋಜಾದಲ್ಲಿ ತೊಡಗಿಸಿಕೊಳ್ಳಬೇಕು. 13 ರಿಂದ 14 ತಾಸುಗಳ ವರೆಗೆ ಉಪವಾಸ ಮಾಡುವುದು ಸಾಧನೆ ಸರಿ ಇದಕ್ಕೆ ಅಲ್ಲಾನ ಕೃಪೆ ಇದೆ. ಇದು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.