
ತಾಳಿಕೋಟೆ:ಮೇ.11: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು ವಯೋಮಿತಿಯ ಅನುಗುಣವಾಗಿ ಪ್ರಥಮ ಭಾರಿಗೆ ದಿ.10 ಬುಧವಾರರಂದು ವಿಧಾನ ಸಭಾ ಚುನಾವಣೆಯ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂದಿಸಿ ತಮ್ಮ ಮತಚಲಾಯಿಸಿ ಸಂತಸ ಹಂಚಿಕೊಂಡರು.
ಈ ಸಮಯದಲ್ಲಿ ಮಾತನಾಡಿದ ಶ್ರೀಗಳು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮತದಾನಕ್ಕೆ ದೊಡ್ಡ ಬೆಲೆ ಇದೆ ಮತ ಎಂಬುದು ನಮ್ಮ ಕ್ಷೇತ್ರದ ಅಷ್ಟೇ ಅಲ್ಲಾ ದೇಶದ ಭವಿಷ್ಯವನ್ನು ಬರೆಯಲಿದೆ ಉತ್ತಮ ವ್ಯಕ್ತಿಗೆ ಮತಚಲಾಯಿಸಿದೆ ಎಂಬ ತೃಪ್ತಿ ನನಗೆ ಸಿಕ್ಕಿದೆ ಎಂದರು.