ಪ್ರಥಮ ದಿನದ ಲಾಕ್‍ಡೌನ್: ಬೀದರ್‍ನಲ್ಲಿ ಜನಜೀವನ ಸ್ತಬ್ದ

ಬೀದರ:ಎ.28: ನಿನ್ನೆ ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಗಳ ವರೆಗೆ ಅಂದರೆ, ಮೇ 12ರ ವರೆಗೆ ರಾಜ್ಯಾದ್ಯಂತ ಮೇಡಿಕಲ್ ಸೇರಿದಂತೆ ಕೇಲವು ಜೀವನಾಂಶಗಳು ಹೊರತುಪಡಿಸಿ ಉಳಿದಂತೆ ಸಂಪೂರ್ಣ ಲಾಕದ್‍ಡೌನ್ ಹೇರಿದ ಹಿನ್ನಲೆಯಲ್ಲಿ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ನಿನ್ನೆ ರತ್ರಿಯಿಂದಲೇ ಎರಡು ವಾರಗಳ ಟೈಟ್ ಕಫ್ರ್ಯು ಹೇರಲಾಗಿದೆ.

ಇಡೀ ಜಿಲ್ಲೆಯಲ್ಲಿ ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆ ವರೆಗೆ ಮಾತ್ರ ಅಗತ್ಯ ವಸ್ತುಗಳಾದ ದಿನಸಿ ವಸ್ತುಗಳು, ತರಕಾರಿ, ಹಣ್ಣು, ಹಂಪಲು, ಹಾಲು, ಮಾಂಸ ಇತ್ಯಾದಿಗಳು ಪುರೈಕೆ ಮಾಡಿದ ಬಳಿಕ ದಿನವಿಡಿ ಸಂಪೂರ್ಣ ನಗರ ಸ್ತಬ್ದವಾಗಿದೆ. ಆಸ್ಪತ್ರೆಗೆ ತೆರಳುವವರು, ಜರೂರಿ ಕೆಲಸಕ್ಕೆ ಹೋಗುವವರು ಹೊರತುಪಡಿಸೊ ಉಳಿದಂತೆ ರಸ್ತೆಗಳು ಖಾಲಿ ಖಾಲಿ ಆಗಿ ಕಂಡುಬಂದಿರುವವು. ಆಟೋರಿಕ್ಷಾಗಳು ವೀರಳವಾಗಿ ಓಡಾಡುತ್ತಿವೆ. ಖಾಕಿ ಟೀಮ್ ನಗರದ ಅನೇಕ ಕಡೆ ರೌಂಡ್ ಹಾಕಿದ್ದರೂ, ಹಾಕದಿದ್ದರೂ ಜನ ಮಾತ್ರ ಕೋವಿಡ್ ಎರಡನೇ ಅಲೆಗೆ ಹೆದರಿ ಮನೆಯಿಂದ ಹೊರ ಬಾರದೇ ಮನೆಯಲ್ಲಿಯೇ ಸ್ವಯಂ ಲಾಕ್ ಆಗುವ ಮೂಲಕ ಸರ್ಕಾರದ ನಿರ್ಧಾರಕ್ಕೆ ಬೆಂಬಲಿಸಿದ್ದಾರೆಂದು ಹೇಳಬಹುದು.

ಇನ್ನು ಉಳಿದ 13 ದಿನಗಳ ಕಾಲ ಹೀಗೆ ಜನ ಹೊರ ಬರದೆ ಸಪೋರ್ಟ್ ಮಾಡಿದರೆ ಕೋರೊನಾ ಎರಡನೇ ಅಲೆಯ ಚೈನ್ ಕಟ್ ಮಾಡಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ.