
ಸಂಜೆವಾಣಿ ವಾರ್ತೆ
ದಾವಣಗೆರೆ. ನ.೧೫; ಚಳ್ಳಕೆರೆಯ ಎಚ್.ಪಿ. ಪಿ ಸಿ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಾವಣಗೆರೆ ತಂಡದವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ತಂಡದಲ್ಲಿ ಮಹಾಂತೇಶ್ ಕೆ ಜೆ,ಸುನೀಲ್ ಟಿ ಬಿ,ಗಣೇಶ್ ಬಿ ಎನ್,ಕೊಟ್ರೇಶ್ ಯು ಎಂ,ಪ್ರಶಾಂತ್ ಎಚ್ ಬಿ, ನಾಗರಾಜ್ ಡಿ ಸಿ,ಗಿರೀಶ್ ಸಿ ಎಸ್,ಮಂಜು ನಾಯ್ಕ,ಆಕಾಶ್ ಎಂ ಎಸ್,ತನ್ವೀರ್ ಎನ್ ಈ, ತೇಜಸ್ ಆಚಾರ್ಯ,ಅಜ್ಜಯ ಬಿ ಬಸವರಾಜ ಎಚ್ ಪಿ,ಸಚ್ಚಿನ್ ಕೆ ಪಿ ಭಾಗವಹಿಸಿದ್ದರು ಹಾಕಿ ತಂಡಕ್ಕೆ ಪ್ರಾಂಶುಪಾಲರಾದ ಡಾ. ದಾದಾಪೀರ್, ದೈಹಿಕ ಶಿಕ್ಷಣ ನಿರ್ದೇಶಕರಾದ ,ಡಾ. ರೇಖಾ ಎಂ ಆರ್ ಪತ್ರಾಂಕಿಕ ವ್ಯವಸ್ಥಾಪಕರಾದ ಶ್ರೀಮತಿ ಗೀತಾದೇವಿ ಹಾಗೂ ಕಾಲೇಜಿನ ಕ್ರೀಡಾ ಸಮಿತಿಯ ಎಲ್ಲಾ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.