ಪ್ರಥಮ ಆರಾಧನೆ ಮಹೋತ್ಸವ

ಬಾಗಲಕೋಟೆ ಜ.43 : ಯತಿಕುಲ ಚಕ್ರವರ್ತಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪ್ರಥಮ ಆರಾಧನಾ ಮಹೋತ್ಸವ ನವನಗರದ ಅಖಿಲ ಭಾರತ ಮಾಧ್ವ ಮಹಾಮಂಡಳ ಶಾಖೆ, ಶ್ರೀಕೃಷ್ಣ ಮಠದ ಸಹಯೋಗದೊಂದಿಗೆ ಬುಧವಾರದಿಂದ ಆರಂಭಗೊಂಡಿದ್ದು ದಿ.16ರವರೆಗೆ ನಡೆಯಲಿದೆ.
ಬುಧವಾರದಂದು ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಂ.ಡಾ.ರಘೊತ್ತಮಾಚಾರ್ಯ ನಾಗಸಂಪಿಗಿ ಅವರು ಜಿತಾಮಿತ್ರ ತೀರ್ಥರು,ಪೇಜಾವರ ಶ್ರೀಗಳ ಕೃತಿಗಳ ಕುರಿತು ಸಮೀಕ್ಷೆ ಮಾಡಿ ಮನುಕುಲದ ಏಳ್ಗೆಗೆ ಪೇಜಾವರರ ಪಾತ್ರ ಮಹತ್ವದ್ದು ಎಂದರು. ದಿ.14ರಂದು ಪಂ ಬಿ.ಎನ್.ಶ್ರೀನಿವಾಸಾಚಾರ್ಯ ಅವರು ಶ್ರೀಪಾದಂಗಳವರ ಪ್ರವಚನದ ಸ್ವಾರಸ್ಯ, ದಿ.15ರಂದು ಪಂ.ಭೀಮಸೇನಾಚಾರ್ಯ ಪಾಂಡುರಂಗಿ ಅವರು ಪೇಜಾವರ ಶ್ರೀಪಾದರ ಗೀತಾಸಾರೋದ್ದಾರ ಕುರಿತು ಪ್ರವಚನ ನೀಡುವರು.
ದಿ.16ರಂದು ಶನಿವಾರ ಬೆಳಿಗ್ಗೆ 9ರಿಂದ ಗುರು ಸ್ತೋತ್ರ ಪಾರಾಯಣ, ಶಾಸ್ತ್ರಾನುವಾದ ನಡೆಯಲಿದ್ದು ಪಂಡಿತರಾದ ಕಿರಣಾಚಾರ್ಯ, ಸುಶೀಲೆಂದ್ರಾಚಾರ್ಯ ಗೊಗ್ಲಿ, ಪ್ರಕಾಶಾಚಾರ್ಯ, ಬಿಂದು ಮಾಧವಾಚಾರ್ಯ ನಾಗಸಂಪಿಗಿ, ವಿಜಯೀಂದ್ರಾಚಾರ್ಯ ಮಣ್ಣೂರ ಅವರು ಭಾಗವಹಿಸುವರು. 12:30ಕ್ಕೆ ಅಲಂಕಾರ ಪಂಕ್ತಿ, ಮಹಾ ನೈವೇದ್ಯ, ತೀರ್ಥ ಪ್ರಸಾದ ವಿತರಣೆಯಾಗಲಿದ್ದು ಎಬಿಎಂಎಂ ಬಾಗಲಕೋಟೆ ಮುಖಪುಟದ ಮೂಲಕವೂ ಕಾರ್ಯಕ್ರಮ ವಿಕ್ಷಿಸಬಹುದಾಗಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.