ಪ್ರಥಮಪೂಜಿತನಿಗೆ ಶ್ರದ್ದಾ ಭಕ್ತಿಯ ನಮನ; ದಾವಣಗೆರೆಯಲ್ಲಿ ಗಣಪತಿಯ ಆರಾಧನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೯; ಗುಣಗಳ ಅಧಿಪತಿ ಗಣಪತಿಯ ಆರಾಧನೆ ನಗರದೆಲ್ಲೆಡೆ ವಿಜೃಂಭಣೆಯಿಂದ ಜರುಗಿತು.ವಿಘ್ನಗಳ ನಿವಾರಕ ಪ್ರಥಮ ಪೂಜಿತನಿಗೆ ಶ್ರದ್ದಾ ಭಕ್ತಿಯಿಂದ ಪೂಜೆ ನೆರವೇರಿಸಲಾಯಿತು.ವಿನಾಯಕನ ಗೆಳೆಯರ ಬಳಗಗಳು,ಸಂಘ ಸಂಸ್ಥೆಗಳು,ಕಚೇರಿಗಳು ಹಾಗೂ ಭಕ್ತರು ತಮ್ಮ ಮನೆಗಳಲ್ಲಿ  ಗಣನಾಯಕನನ್ನು ಆರಾಧಿಸಿದರು.ನಗರದ ಎಂಸಿಸಿ ಎ ಬ್ಲಾಕ್ ನ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ,ಆಂಜನೇಯ ಬಡಾವಣೆಯ  ೧೬ ನೇ ತಿರುವಿನಲ್ಲಿ ಶ್ರೀರಾಮ ಸೇನೆ ಗ್ರೂಪ್ ,ಸಿದ್ದವೀರಪ್ಪ ಬಡಾವಣೆಯ ೧೧ ನೇ ತಿರುವಿನಲ್ಲಿ ಸೈ ಪ್ರವಾಸಿ ಗ್ರೂಪ್,ಆಂಜನೇಯ ಬಡಾವಣೆಯ ೧೫ ನೇ ತಿರುವಿನಲ್ಲಿ ಜೈ ಬಜರಂಗಿ ವತಿಯಿಂದ ಗಣಪತಿಯ ಆರಾಧನೆ ನಡೆಯಿತು.ಸಿದ್ದವೀರಪ್ಪ ಬಡಾವಣೆಯ ದೇವನಗರಿ ಕಾ ರಾಜ್ ,ತೋಗಟವೀರ ಸಮುದಾಯ ಭವನದಲ್ಲಿ ಹಿಂದೂ ಯುವಶಕ್ತಿ ಗಣಪ,ಚರ್ಚೆ ರಸ್ತೆಯ ಹಿಂದು ಯುವಸೇನೆ ಗಣಪ,ದಾವಣಗೆರೆಯ ವರದಿಗಾರರ ಕೂಟದಲ್ಲಿ ಪರಿಸರ ಸ್ನೇಹಿ ಗಣಪ ಸೇರಿದಂತೆ ವಿವಿಧೆಡೆ ವಿಜೃಂಭಣೆಯಿಂದ ಗಣಪತಿಯ ಆರಾಧನೆ ನಡೆಯಿತು.