ಪ್ರತ್ಯೇಕ ರಾಜ್ಯ ಕೂಗು ಮಾರ್ಧನಿ

ಬೆಳಗಾವಿ,ಜ.೧- ಹೊಸ ವರ್ಷದ ಮೊದಲ ದಿನದಂದೆ ಹಿರೇಬಾಗೇವಾಡಿ ಪಟ್ಟಣದಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಧ್ವಜ ಹಾರಿಸುವ ಮೂಲಕ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಒತ್ತಾಯಿಸಿದೆ.
ಈ ಮೂಲಕ ಹೊಸ ವರ್ಷದ ಮೊದಲ ದಿನವೇ ರಾಜ್ಯದಲ್ಲಿ ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎದ್ದಿವೆ.
ಗಡಿನಾಡು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಪಟ್ಟಣದಲ್ಲಿ ಪೊಲೀಸರ ಕಣ್ತಪ್ಪಿಸಿ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವಜ ಹಾರಿಸಲಾಗಿದೆ.
ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಧ್ವಜಾರೋಹಣ ಮಾಡಲಾಗಿದ್ದು, ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ್‌ಗಿಟಗಿ ನೇತೃತ್ವದಲ್ಲಿ ಪ್ರತ್ಯೇಕ ಧ್ವಜಾರೋಹಣ ಮಾಡಲಾಗಿದೆ.
ಇನ್ನು ಪ್ರತ್ಯೇಕ ಉತ್ತರ ಕರ್ನಾಟಕ ಧ್ವಜಾರೋಹಣ ನಡೆಸುತ್ತಿದ್ದ ಮಾಹಿತಿ ತಿಳಿದು, ಪೊಲೀಸರು ಸ್ಥಳಕ್ಕಾಗಮಿಸುವುದನ್ನು ಕಂಡಾಗ ರಾಷ್ಟ್ರಗೀತೆ ಹಾಡಿದಂತ ಹೋರಾಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಪೊಲೀಸರು ಮುಂದಾದ
ವೇಳೆಯಲ್ಲಿಯೇ ಪ್ರತ್ಯೇಕ ಧ್ಜಜಾರೋಹಣ ಮಾಡಿದ್ದಾರೆನ್ನಲಾಗಿದೆ.