ಪ್ರತ್ಯೇಕ ರಾಜ್ಯದ ಕನಸುಗಾರ ಉಮೇಶ್ ಕತ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕಲಬುರಗಿ:ಸೆ.7: ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ ವಿವಿಧ ಖಾತೆಗಳ ಸಚಿವರಾಗಿ ಖಾತೆಗಳಿಗೆ ನ್ಯಾಯ ಒದಗಿಸಿ ಇಂದು ನಮ್ಮನ್ನಗಲಿದ ಅರಣ್ಯ ಸಚಿವ ಉಮೇಶ್ ಕತ್ತಿ ಅವರಿಗೆ ಇಂದು ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ವತಿಯಿಂದ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ದಾನಂಜಲಿ ಸಲ್ಲಿಸಿ ಲಾಯಿತು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕಲ್ಯಾಣ ಕನ್ನಡ ಪ್ರತ್ಯೇಕ ರಾಜ್ಯ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ.ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದ ಅವರು ಇಂದು ನಮ್ಮನ್ನಗಲಿ ಇರುವುದು ದೇಶಕ್ಕೆ ರಾಜ್ಯಕ್ಕೆ ವಿಶೇಷವಾಗಿ ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟ ಅವರು ಅಧಿಕಾರದಲ್ಲಿದ್ದರು ಕೂಡ ಸಚಿವ ಸ್ಥಾನದಲ್ಲಿದ್ದರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಸಹಿಸದೆ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದ ಏಕೈಕ ರಾಜಕಾರಣಿ ಅಂತ ರಾಜಕಾರಣಿ ನಮ್ಮನ್ ಅಗಲಿರುವುದು ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ತುಂಬಲಾರದ ನಷ್ಟ ಮುಂದಿನ ಚುನಾವಣೆ ಆಗೋವರೆಗಾದರು ಸಚಿವ ಉಮೇಶ್ ಕತ್ತಿಯವರು ಬದುಕಿದ್ದರೆ ಪ್ರತ್ಯೇಕ ರಾಜ್ಯದ ಮಾಡದೆ ಬಿಡುತ್ತಿರಲಿಲ್ಲ ಅವರ ಮುಖ್ಯಮಂತ್ರಿ ಕನಸು ಕೂಡ ನನಸಾಗಲಿಲ್ಲ ಇದರಿಂದ ಉತ್ತರ ಉತ್ತರ ಕರ್ನಾಟಕ ಜನತೆ ದುಃಖದಲ್ಲಿ ಮುಳುಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಹೇಳಿದರು ಸಂದರ್ಭದಲ್ಲಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ. ತಾತಗೌಡ ಪಾಟೀಲ್. ಬಿಜೆಪಿ ಗ್ರಾಮೀಣ ಮಹಿಳಾ ಅಧ್ಯಕ್ಷೆ ಭಾಗೀರಥಿ ಗುನ್ನಪುರ. ಮಹಾದೇವಿ ಏಳವಾರ. ಡಾ ರಾಜಶೇಖರ್ ಬಂಡೆ. ಪ್ರಕಾಶ್ ವಾಘಮೋರೆ. ರೋಹಿತ್ ಜಮಾದಾರ್ ಉಪಸ್ಥಿತರಿದ್ದರು