
ಚಾಮರಾಜನಗರ, ಏ.21:- ಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೆÇಗೆ ಜಾನ್ ಡಿಸ್ಟಿಲರೀಸ್ ಪ್ರೈವೆಟ್ ಲಿಮಿಟೆಡ್ ನಿಂದ ಬುಧವಾರ (ಏ.19) ದಂದು ಸರಬರಾಜಾದ ಮದ್ಯದ ರಟ್ಟಿನ ಪೆಟ್ಟಿಗೆಗಳ ಮೇಲೆ ಲಗತ್ತಿಸಲಾದ ಅಬಕಾರಿ ಭದ್ರತಾ ಚೀಟಿಗಳು ಹಾಗೂ ರಟ್ಟಿನ ಪೆಟ್ಟಿಗೆ ಒಳಗೆ ಇದ್ದ ಮದ್ಯದ ಟೆಟ್ರಾ ಪ್ಯಾಕ್ ಗಳ ಅಬಕಾರಿ ಭದ್ರತಾ ಚೀಟಿಗಳು ಹೊಂದಾಣಿಕೆಯಾಗದ ಕಾರಣದಿಂದ 51,81,260 ರೂ. ಮೌಲ್ಯದ 14,688 ಲೀ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೊಕದ್ದಮೆ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರ ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಮಂಗಳವಾರ (ಏ.18)ದಂದು ಮ್ಯೆಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮಲೆಯೂರಿನ ಆನ್ ಹ್ಯೂಸರ್ ಬುಸ್ ಇನ್ ಬೇವ್ ಇಂಡಿಯಾ ಲಿಮಿಟೆಡ್ ನಿಂದ ಸರಬರಾಜಾದ ಮದ್ಯದ ದಾಸ್ತಾನಿಗೆ ಬಾರ್ ಕೋಡ್ ಲೇಬಲ್ ಸ್ಕ್ಯಾನ್ ಆಗದೆ ತಾಳೆ ಹೊಂದಿಲ್ಲದಿರುವುದು ಕಂಡುಬಂದ ಮೇರೆಗೆ 12,47,048 ರೂ. ಮೌಲ್ಯದ ಒಟ್ಟಾರೆ 8,970 ಲೀ ಮದ್ಯವನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಬ್ರೀವರಿ ಸನ್ನದುದಾರರು ಹಾಗೂ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.