ಪ್ರತ್ಯೇಕ ಘಟನೆಗಳಲ್ಲಿ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಕಾಗೆಗಳ ಮೃತದೇಹ ಪತ್ತೆ!

ಶಿವಮೊಗ್ಗ, ಜ. 9: ಎರಡು ಪ್ರತ್ಯೇಕ ಘಟನೆಗಳಲ್ಲಿ ಜಿಲ್ಲೆಯ ತೀರ್ಥಹಳ್ಳಿ ಹಾಗೂ
ಶಿವಮೊಗ್ಗದಲ್ಲಿ, ಮೃತಪಟ್ಟ ಸ್ಥಿತಿಯಲ್ಲಿ ಕಾಗೆಗಳು ಪತ್ತೆಯಾಗಿರುವ ಘಟನೆ
ವರದಿಯಾಗಿದೆ.
ತೀರ್ಥಹಳ್ಳಿ ವರದಿ: ಪಟ್ಟಣದ ಹೊರವಲಯ ಮೇಲಿನಕುರುವಳ್ಳಿ ಗ್ರಾಮದ ಹೋಟೆಲ್ ವೊಂದರ ಬಳಿ
ಸುಮಾರು 2 ಕ್ಕೂ ಅಧಿಕ ಕಾಗೆಗಳ ಮೃತದೇಹ ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಶುವೈದ್ಯ ಇಲಾಖೆ ಅಧಿಕಾರಿಗಳು ಭೇಟಿಯಿತ್ತು
ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಮರಣೊತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. .
ಶಿವಮೊಗ್ಗ ವರದಿ: ನಗರದ ಹೊರವಲಯ ಗೆಜ್ಜೇನಹಳ್ಳಿ ರಸ್ತೆಯ ಕೆಹೆಚ್’ಬಿ ಪ್ರೆಸ್
ಕಾಲೋನಿಯಲ್ಲಿ ಕಾಗೆಯೊಂದರ ಮೃತದೇಹ ಪತ್ತೆಯಾಗಿರುವ ಘಟನೆ ಶನಿವಾರ ಬೆಳಿಗ್ಗೆ
ನಡೆದಿದೆ.
ಚರಂಡಿಯಲ್ಲಿ ಕಾಗೆಯ ಮೃತದೇಹ ಪತ್ತೆಯಾಗಿದ್ದು, ಯಾವಾಗ ಕಾಗೆ ಮೃತಪಟ್ಟಿದೆ ಎಂಬುವುದರ
ಸ್ಪಷ್ಟ ಮಾಹಿತಿಯಿಲ್ಲವಾಗಿದೆ. ಕಾಗೆಯ ಮೃತದೇಹ ಗಮನಿಸಿದ ಸಾರ್ವಜನಿಕರು, ಪಶು ವೈದ್ಯ
ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಕೋಟೆಗಂಗೂರು ಪ್ರಾಥಮಿಕ ಪಶು ಆರೋಗ್ಯ ಚಿಕಿತ್ಸಾ ಕೇಂದ್ರದ ಸಿಬ್ಬಂದಿಗಳಾದ
ವಿ.ಎಸ್.ವೆಂಕಟೇಶ್, ಎಂ.ಸಂಜೀವಮೂರ್ತಿಯವರು ಸ್ಥಳಕ್ಕಾಗಮಿಸಿ ಕಾಗೆಯ ಮೃತದೇವನ್ನು
ಕೊಂಡೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರವಷ್ಟೆ ಕಾಗೆಯ ಸಾವಿಗೆ ಸ್ಪಷ್ಟ ಕಾರಣ
ತಿಳಿದುಬರಬೇಕಾಗಿದೆ.