ಪ್ರತ್ಯೇಕ ಅಪಘಾತ : ಮೂವರ ದುರ್ಮರಣ

ಸಿಂಧನೂರು.ಜ.೯- ತಾಲೂಕಿನಲ್ಲಿ ಇಂದು ನಡೆದ ಪ್ರತ್ಯೇಕ ಅಪಘಾತಗಳಲಿ ಮೂವರು ಮರಣ ಹೊಂದಿದ ಘಟನೆ ಜರುಗಿದೆ.
ತಾಲೂಕಿನ ತುರ್ವಿಹಾಳದಲ್ಲಿ ಕೆಇಬಿ ಹತ್ತಿರ ಪಾದಾಚಾರಿ ಓರ್ವನಿಗೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದನೆ. ತುರವಿಹಾಳ ಗ್ರಾಮದ ಬಸವರಾಜ ನಾಯಕ (೨೫) ಯುವಕ ಮೃತ ದುರ್ದೈವಿ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಹಿಂದೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ. ಪೊಲೀಸರು ಕಾರನ್ನು ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ರಾತ್ರಿ ತಾಲ್ಲೂಕಿನ ಗೊರೇಬಾಳ ಹತ್ತಿರ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪಿರುವ ಘಟನೆ ಜರುಗಿದೆ. ಗೊರೇಬಾಳದ ವಿಎಸ್‌ಎಸ್‌ಎನ್ ನಿರ್ದೇಶಕ ಮಲ್ಲಿಕಾರ್ಜುನ ಗೌಡ (೫೦) ಮೃತ ದುರ್ದೈವಿ. ಮೃತ ವ್ಯಕ್ತಿಯನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.