
(ಸಂಜೆವಾಣಿ ವಾರ್ತೆ)
ಹುಮನಾಬಾದ್:ಆ.29: ಪ್ರತಿಯೊಬ್ಬರ ಮಾನಸಿಕ ಹಾಗೂ ದೈಹಿಕ ನೆಮ್ಮದಿಗೆ ಪೂರಕವಾಗಿ ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.
ತಾಲೂಕಿನ ಮಾಣಿಕ ನಗರ ಗ್ರಾಮದ ಮಾಣಿಕ ಪ್ರಭು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ (ಪದವಿ) ಇಲಾಖೆ ಹಾಗೂ ಹುಮನಾಬಾದ್ ಪಟ್ಟಣದ ಸರ್ವೋ ದಯ ಸಂಯುಕ್ತ ಪದವಿ ಪೂರ್ವ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ 2023-24ನೇ ಸಾಲಿನ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಬಳಿಕ
ಮಾತನಾಡಿದರು.ಯುವಕ ಯುವತಿಯರಿಗೆ ಸಾಧನೆ ಮಾಡಲು ಕ್ರೀಡೆ ಒಂದು ಉತ್ತಮ ವೇದಿಕೆಯಾಗಿದೆ. ಶಾಲಾ ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡುವ ಮೂಲಕ ಕ್ರೀಡಾ ಕ್ಷೇತ್ರದ ಸದುಪಯೋಗ ಪಡೆದು ಕೊಂಡು ಉತ್ತಮ ಸಾಧನೆ ಮಾಡುವ ಪ್ರಾಮಾಣಿಕ ಪ್ರಯತ್ನ ನಾಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪಂಚಶೀಲಾ ಹೆಗ್ಗಣೆ ,ಬತಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಬತಲಿ,ಬತಲಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷಗುರುಲಿಂಗಪ್ಪ ಭಾವಿ, ದೈಹಿಕ ಶಿಕ್ಷಕರಸಂಘದ ತಾಲೂಕ ಅಧ್ಯಕ್ಷ ಸೂರ್ಯಕಾಂತ ಹಾವಶೆಟ್ಟಿ ಸರ್ವೋ ದಯಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಶಾಂತವೀರ ಯಲಾಲ, ಬಿಟಿವಿಪಿ ಕಾಲೇಜಿನ ಪ್ರಾಚಾರ್ಯ ‘ಶಿವರಾಜ
ಕಲಗೊಂಡ, ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಂಡರಿನಾಥ ಹುಗ್ಗಿ ಉಪನ್ಯಾಸಕರಾದಹಣಮಂತ ಮಡಿವಾಳ, ಭಾರತಿ ಕಡ್ಡಿ ಸೇರಿದಂತೆ ಇದ್ದರು.