ಪ್ರತಿ ಯೂನಿಟ್‍ಗೆ 1.63 ರೂ ಹೆಚ್ಚಳದ ಪ್ರಸ್ತಾಪ ಆಯೋಗದ ಎದುರು ಮಂಡನೆ

ಕಲಬುರಗಿ:ಫೆ.20: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣನವರ ಪ್ರತಿ ಯೂನಿಟ್ ಒಂದು ರೂ 1.63 ಹೆಚ್ಚಳದ ಪ್ರಸ್ತಾಪವನ್ನು ಆಯೋಗದ ಎದುರು ಮಂಡಿಸಿದರು.
ಸಾಧಕ- ಬಾಧಕ ಅವಲೋಕಿಸಿ ವಿದ್ಯುತ್ ದರ ಪರಿಷ್ಕರಣೆ ವರದಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು ಆರ್ಥಿಕ ವರ್ಷ 2025 ನೇ ಸಾಲಿಗಾಗಿ ವಿದ್ಯುತ್ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆಯಲ್ಲಿ ಗ್ರಾಹಕರ ಅಭಿಪ್ರಾಯ ಆಲಿಸಿ ಮಾತನಾಡಿದ ಅವರು, ದರ ಹೆಚ್ವಳ ಮಾಡಿದರೆ ಗ್ರಾಹಕರಿಗೆ ಹೊರೆ. ದರ ಹೆಚ್ಚಳ ಮಾಡದಿದ್ದರೆ ವಿದ್ಯುತ್ ಕಂಪನಿಗಳಿಗೆ ನಷ್ಟ. ಹೀಗೆ ಎಲ್ಲವನ್ನು ಅಭ್ಯಸಿಸಿ ವರದಿ ರೂಪಿಸಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಭೀಮಾಶಂಕರ ಪಾಟೀಲ ಮಾತನಾಡಿ,ಸಣ್ಣ ಸೂಕ್ಷ್ಮೀ ಕೈಗಾರಿಕೆಗಳಿಗೆ 50 ಪ್ರತಿಶತ ಸಬ್ಸಿಡಿ ನೀಡಬೇಕು ರೈತರ ಕರೆಂಟ್ ತೆಗೆಯಲಾರದೆ ಕ್ರಮ ತೆಗೆದುಕೊಳ್ಳಬೇಕು ಕರೆಂಟ್ ತೆಗೆಯುವುದರಿಂದ ನಮ್ಮ ಕೆಲಸ ಹಾಗೆ ಉಳಿದು ನಾವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದರು.
ಸೋರಿಕೆ ಹಾಗೂ ಕಳ್ಳತನ ತಡೆಗಟ್ಟಿದರೆ ದರ ಹೆಚ್ವಳದ ಪ್ರಶ್ನೆಯೇ ಬರುವುದಿಲ್ಲ ಎಂದು ಗ್ರಾಹಕರು ಎಲ್ಲ ಸಭೆಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಷ್ಟ ತಪ್ಪಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕಂಪನಿಗಳಿಗೆ ಸೂಚಿಸಲಾಗಿದೆಯಲ್ಲದೇ ಹಲವಾರು ದಿನಗಳಿಂದ ಕೇಳಿ ಬರುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಭೆ ನಡೆಸುವಂತೆ ಇಲಾಖಾ ಮುಖ್ಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಅನಧಿಕೃತ ಶುದ್ದೀಕರಣ ಮೀಟರ ಅಳವಡಿಸುತ್ತಾರೆ, ವಿದ್ಯುತ್ ಅವಘಡದಲ್ಲಿ ಜನರು ಸಾವನ್ನಪ್ಪುತ್ತಾರೆ, ಲೈನ್ ಮೆನ್ ಬಳಕೆ ಸರಿಯಾಗುತ್ತಿಲ್ಲ ಎಲ್ಲಾ ಅಧಿಕಾರಿಗಳು ಸರಿಯಾದ ಕೆಲಸ ನಿರ್ವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ವಿದ್ಯುತ್ ದರ ಹೆಚ್ಚಳ ಬೇಡವೇ ಬೇಡ ಈಗಾಗಲೇ ದಿನ ಬಳಕೆ ವಸ್ತುಗಳ ಜತೆಗೆ ಮಳೆ ಅಭಾವದಿಂದ ತರಕಾರಿ ಬೆಲೆ ಹೆಚ್ಚಳವಾಗಿರುವಾಗ ವಿದ್ಯುತ್ ದರ ಪರಿಷ್ಕರಣೆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ದರ ಹೆಚ್ಚಳ ಬೇಡವೇ ಬೇಡ ಎಂದು ಗ್ರಾಹಕರು ಒಕ್ಕೊರಲಿನಿಂದ ಸಭೆಯಲ್ಲಿ ಮನವಿ ಮಾಡಿದರು.
ಪರಿಷ್ಕರಣೆ ಎಂದರೆ ದರ ಹೆಚ್ಚಳ ಮಾಡುವುದೆವಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಹೆಸರಿನಲ್ಲಿ ಸಾರ್ವಜನಿಕ ಅಹವಾಲುಗಳ ಸಭೆ ನಡೆಸಲಾಗುತ್ತಿದೆ. ದರ ಪರಿಷ್ಕರಣೆ ಎಂದರೆ ದರ ಹೆಚ್ಚಳ ಮಾಡುವುದಾಗಿದೆ. ಹೀಗಾಗಿ ಪರಿಷ್ಕರಣೆ ಬದಲು ದರ ಹೆಚ್ಚಳದ ಸಭೆ ಎಂಬುದಾಗಿ ಬದಲಾಯಿಸಿ. ಒಟ್ಟಾರೆ ಒಮ್ಮೆಯಾದರೂ ವಿದ್ಯುತ್ ದರ ಕಡಿಮೆ ಮಾಡಿ ಸಭೆಗೆ ಅರ್ಥ ತನ್ನಿ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎ.ರಾವೂರ ಸಭೆಯಲ್ಲಿ ಆಗ್ರಹಿಸಿದರು.
ಸೋಲಾರ ದರ ಕಡಿಮೆಯಾಗಿರುವಾಗ ದರ ಹೆಚ್ಚಳವೇಕೆ?: ಸಾರ್ವಜನಿಕ ನೀಡುತ್ತಿದ್ದ ಸೋಲಾರ ದರ ಕಡಿಮೆ ಮಾಡಿರುವಾಗ, ವಿದ್ಯುತ್ ದರ ಹೆಚ್ಚಳವೇಕೆ ಎಂದು ಸುಭಾಷಚಂದ್ರ ಬೆನಕನಹಳ್ಳಿ ಆಯೋಗವನ್ನು ಪ್ರಶ್ನಿಸಿದರು.
ಸಭೆಯಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ್ ಸದಸ್ಯ ಎಂ.ಡಿ.ರವಿ, ಕಾರ್ಯದರ್ಶಿ ಬಿ.ಎನ್. ವರಪ್ರಸಾದ, ಉಪನಿರ್ದೇಶಕ ಶಂಕರ ಸುಂದರ್, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ್, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಭೀಮಾಶಂಕರ ಪಾಟೀಲ್, ಕಕ ಭಾಗದ ಕೈಗಾರಿಕಾ ಸಂಘರ ಪ್ರತಿನಿಧಿಗಳು ಸೇರಿದಂತೆ ಮುಂತಾದವರಿದ್ದರು.