ರಾಯಚೂರು, ಫೆ.೨೮- ಪ್ರತಿ ೩ ತಿಂಗಳಿಗೊಮ್ಮೆ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ೨೦ ಪೈಸೆಯಿಂದ ೩೦ ಪೈಸೆಯಷ್ಟು ಫ್ಯೂಲ್ ಅಡ್ಜಸ್ಟ್‌ಮೆಂಟ್ ಚಾರ್ಜಸ್ ಎಂದು ಹೆಚ್ಚಿಸುತ್ತಿರುವುದು ಖಂಡನೀಯ ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಕೆಇಆರ್ ಸಿ ಕಾಯ್ದೆ ಪ್ರಕಾರ, ಫ್ಯೂಲ್ ಅಡ್ಜಸ್ಟ್‌ಮೆಂಟ್ ಚಾರ್ಜನ್ನು ಕೇವಲ ೩ ತಿಂಗಳಿಗೆ ಮಾತ್ರ ವಿದಿಸಬೇಕೆಂಬ ನಿಯಮವಿದೆ.ಆದರೆ ೩ ತಿಂಗಳು ಬಿಟ್ಟು ೮ ತಿಂಗಳಿಗೆ ಫ್ಯೂಲ್ ಅಡ್ಜಸ್ಟ್‌ಮೆಂಟ್ ಚಾರ್ಜಸ್ ವಿಧಿಸುತ್ತಿದೆ.ಇದೆ ರೀತಿ ಹೆಚ್ಚಿಗೆ ಚಾರ್ಜಸ್ ವಿಧಿಸಿದರೆ ಮುಂದಿನ ದಿನಗಳಲ್ಲಿ ಉದ್ದಿಮೆದಾರರು ತಮ್ಮ ಇಂಡಸ್ಟ್ರಿಗಳನ್ನು ಮುಚ್ಚುವ ಪರಿಸ್ಥಿತಿಗೆ ತಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.
ರೂಫ್ ಟಾಪ್ ಸೋಲಾರ್ ಸಿಸ್ಟಮ್ ಅಳವಡಿಸುವಂತೆ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ.ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವುದರಿಂದ ಮತ್ತು ಕಲ್ಲಿದ್ದಲಿನ ಅಭಾವದಿಂದ ಇಲಾಖೆಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದರು.
ಎಚ್.ಟಿ -೨ ಎ ಕೈಗಾರಿಕಾ ಸ್ಥಾವರಗಳಿಗೆ ನಿಗದಿತ ಶುಲ್ಕ ಮಾಸಿಕ ಪ್ರತಿ ಕೆವಿಎ ಗೆ ಪ್ರಸ್ತುತ ರೂ.೨೬೫ ಇದ್ದು,ಈಗಿನ ದರ ರೂ.೫೫೦ ಕ್ಕೆ ಹೆಚ್ಚಿಸಿರುವು ಖಂಡನೀಯ.
ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಿಂದ ಹಿಡಿದು ಈಗಲೂ ಸಹ ಆರ್ಥಿಕವಾಗಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದಾವೆ.ಉತ್ಪನ್ನವಾಗುವ ವಿದ್ಯುತ್ ಹಾಗೂ ಖರೀದಿ ಮಾಡುವ ವಿದ್ಯುತ್ ಬಗ್ಗೆ ಪರಿಶೀಲಿಸಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪನ್ನ ಮಾಡಬೇಕೆಂದು ಸಂಶೋಧನೆ ಮಾಡಿದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು, ಜೆಸ್ಕಾಂ ಇಲಾಖೆಗೆ ಗ್ರಾಹಕರಿಂದ ಬರುವ ಹಣವು ಸಾಕಷ್ಟು ಬಾಕಿ ಇದೆ ಎಂದು ತಿಳಿಸಿದ್ದಿರಿ ಆ ಹಣವನ್ನು ವಸೂಲು ಮಾಡಲು ಒಂದು ಕಮಿಟಿಯನ್ನು ರಚಿಸಿ ಸರ್ಕಾರದ ಬಾಕಿ ಹಣ ಮತ್ತು ಗ್ರಾಹಕರ ಬಾಕಿ ಹಣವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರವಿ, ಆನಂದರೆಡ್ಡಿ ಸೇರಿದಂತೆ ಇತರರು ಇದ್ದರು.