ಪ್ರತಿ ಮನೆ ಮನದಲ್ಲಿ ಜ್ಞಾನ-ವಿಜ್ಞಾನದ ಬೆಳಕು ಮೂಡಲಿ

ಕೋಲಾರ, ನ, ೨೪- ಸಮಾಜದಿಂದ ಸಮಾಜಕ್ಕಾಗಿ ಜ್ಞಾನ ಇದು ನಮ್ಮ ದೃಷ್ಟಿಕೋನ ಆಗಬೇಕು. ಸಮಾಜದ ಬದಲಾವಣೆಗೆ ಪ್ರತಿ ಸಂದರ್ಭದಲ್ಲಿ ಮನೆ ಮನಗಳಲ್ಲಿ ಜ್ಞಾನ ವಿಜ್ಞಾನದ ಬೆಳಕು ಪ್ರಜ್ವಲಿಸುವಂತಾಗಬೇಕು. ಆಗ ಮಾತ್ರ ಜ್ಞಾನ ವಿಜ್ಞಾನ ಆವಿಷರಗಳು ಜನ ಮನ ಮುಟ್ಟಲು ಸಾಧ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಕೃಷಮೂರ್ತಿ ಅಭಿಪ್ರಾಯಪಟ್ಟರು.
ನಗರದ ಚಿನ್ಮಯ ವಿದ್ಯಾಲಯ ಸಭಾಂಗಣದಲ್ಲಿ ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಎಲ್ಲಾ ಹಂತದಲ್ಲೂ ತನ್ನದೇ ಆದ ಸ್ಥಾನ ಉಳಿಸಿಕೊಂಡು ವೈಜ್ಞಾನಿಕ ನೆಲೆಗಟ್ಟಿನ ಮೂಲಕ ಭದ್ರ ಬುನಾದಿಯ ಹಾಕಿಕೊಟ್ಟಿದೆ. ಇಂದಿನ ಸಮಸ್ಯೆಗಳು ಮತ್ತು ಮುಂದಾಗಬಹುದಾದ ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನ ಮಂಥನ ನಡೆಯಬೇಕಾಗಿದೆ ಎಂದರು.
ಜಿಲ್ಲೆಯ ಪ್ರತಿ ಶಾಲೆಯಲ್ಲಿ ವಿಜ್ಞಾನ ಸಂಘಗಳನ್ನು ಮತ್ತಷ ಬಲಿಷ್ಠ ಗೊಳಿಸಲು ಜ್ಞಾನ ವಿಜ್ಞಾನ ಸಮಿತಿ ಸಹಕಾರ, ಈ ದೆಸೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಜ್ಞಾನ ಚರ್ಚೆಗಳು ಆಗಿಂದಾಗೆ ನಡೆಯುವ ಮೂಲಕ ಯುವ ವಿಜ್ಞಾನಿಗಳನ್ನು ತಯಾರು ಮಾಡುವ ಕಾರ್ಯದಲ್ಲಿ ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಈ. ಬಸವರಾಜ್ ಮಾತನಾಡಿ ರಾಜ್ಯದಾದ್ಯಂತ ಅನೇಕ ವಷಗಳಿಂದ ವೈಜ್ಞಾನಿಕ ಮನೋಭಾವನೆಯನ್ನು ಹಲವಾರು ಕಾರ್ಯಕ್ರಮಗಳನ್ನು ಸಮಿತಿ ಮಾಡುತ್ತಾ ಬಂದಿದ್ದು ಇದೇ ನಿಟ್ಟಿನಲ್ಲಿ ಈಗಾಗಲೇ ಮಾಡಿರುವ ರಾಜ್ಯ ರಸಪ್ರಶ್ನೆಯಲ್ಲಿ ನಾಲ್ಕು ಸಾವಿರದ ಮುನ್ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಕೋಲಾರ ಜಿಲ್ಲೆಯ ವೇಣು ವಿದ್ಯಾ ಸಂಸ್ಥೆಯ ರವರಿಗೆ ಮೊದಲ ಬಹುಮಾನ ಬಂದಿದ್ದು ಇದು ಜಿಲ್ಲೆಯ ಮತ್ತು ರಾಜ್ಯದ ಗೌರವ ಎಂದು ಬಣ್ಣಿಸಿದರು.
ಉಪಾಧ್ಯಕ್ಷ ನಾಯಕ್ ಮಾತನಾಡಿ ವಿಜ್ಞಾನ ತಂತ್ರಜ್ಞಾನ ಜೊತೆ ಜೊತೆಗೆ ಜ್ಞಾನಕ್ಕೆ ಹೆಚ್ಚು ಹೊತ್ತು ಕೊಡುವ ಹಲವಾರು ಕಾರ್ಯಕ್ರಮಗಳನ್ನು ಜ್ಞಾನ ವಿಜ್ಞಾನ ಸಂಬಂಧ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವಂತಹ ಆರ್ಯ ನಿರಂತರ ಆಗಬೇಕು ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್. ಅಧ್ಯಕ್ಷತೆ ವಹಿಸಿದ್ದು ಜಿಲ್ಲಾ ಶಿಕ್ಷಣಾಧಿಕಾರಿ ಸಿ ಆರ್ ಅಶೋಕ್, ಮತ್ತಿತರರು ಉಪಸ್ಥಿತರಿದ್ದರು
ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತ್ರಿಷ ವೇಣು ವಿದ್ಯಾ ಸಂಸ್ಥೆ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎನ್.ಮನು ದ್ವಿತೀಯ ಸ್ಥಾನ ಪಡೆದ ಹೇಮಂತ್ ಕುಮಾರ್ ಅಮರ ಜ್ಯೋತಿ ಶಾಲೆ, ಮುಳಬಾಗಲು ತಾಲೂಕು ಎನ್.ದೀಪ್ತಿ,s ಚಿನ್ಮಯ ವಿದ್ಯಾಲಯ ಕೋಲಾರ ಇವರನ್ನು ಸನ್ಮಾನಿಸಲಾಯಿತು ಹಾಗೂ ಹಾಗೂ ಜಿಲ್ಲೆಯ ಎಲ್ಲಾ ಸಂಯೋಜಕರನ್ನು ಮಾರ್ಗದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು
ಈ ಸಮಯದಲ್ಲಿ ಸಮಿತಿಯ ರೇಣುಕಾ.ಕೆ ಉಪಾಧ್ಯಕ್ಷರು. ಶರಣಪ್ಪ ಜಮಾದಾರ್ ಕಾರ್ಯದರ್ಶಿ ಕೆ.ವಿ.ಜಗನ್ನಾಥ್ ಖಜಾಂಚಿ, ಸಿ.ವಿ.ನಾಗರಾಜ್ ಸಂಘಟನಾ ಕಾರ್ಯದರ್ಶಿ ಡಿ.ಎನ್.ಮುಕುಂದ ಜಿಲ್ಲಾ ಸಂಯೋಜಕರು ಸುರೇಶ್ ಕುಮಾರ್ ಸಹ ಕಾರ್ಯದರ್ಶಿ ನಟರಾಜ್ ತಾಲೂಕು ಅಧ್ಯಕ್ಷರು ತಾಯಿಲೂರಪ್ಪ, ಅಧ್ಯಕ್ಷರು ಮುಳಬಾಗಲು ತಾಲ್ಲೂಕು, ಚಿನ್ಮಯ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಹಾಜರಿದ್ದರು.