ಪ್ರತಿ ಮನೆಯಲ್ಲೂ ರಾರಾಜಿಸಲಿ ರಾಷ್ಟ್ರಧ್ವಜ: ವೆಂಕಟೇಶ ತೆಲಾಂಗ್

ಕಾಳಗಿ:ಆ.1 :ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷಗಳ ಶುಭ ಸಂದರ್ಭದಲ್ಲಿ ನಾವು ನಮ್ಮ ರಾಷ್ಟ್ರವೆಂಬ ದೇಶಭಕ್ತಿಯೊಂದಿಗೆ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಬಹು ವಿಜೃಂಭಣೆಯಿಂದ ರಾಷ್ಟ್ರಾಧ್ಯಂತ ಆಚರಣೆ ಮಾಡುತ್ತಿದ್ದು, ಆಜಾದಿಕಾ ಅಮೃತ್ ಮಹೋತ್ಸವದ ನಿಮಿತ್ಯ ಕೇಂದ್ರ ಸರ್ಕಾರವು ಹರ್… ಘರ್… ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಅಗಸ್ಟ್ 11 ರಿಂದ 17ರ ವರೆಗೆ ದೇಶದ ಪ್ರತಿಯೊಂದು ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶ ಭಕ್ತಯನ್ನು ಪ್ರತಿಬಿಂಬಿಸುವ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಇಲ್ಲಿಯ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ ಅವರು ಸಾರ್ವಜನಿಕರಲ್ಲಿ ಮನವಿಮಾಡಿದರು.

ಸಾರ್ವಜನಿಕರು ತಮ್ಮ ಸ್ವಂತ ಖರ್ಚಿನಲ್ಲಿ ರಾಷ್ಟ್ರಧ್ವಜವನ್ನು ಖರಿದಿಸಿ, ಅಗಷ್ಟ್ 11ರಿಂದ 17ರ ವರೆಗೆ ಹಾರಿಸಬೇಕು. ಅಭಿಯಾನದಲ್ಲಿ ಪಟ್ಟಣದ ಕಾರ್ಯವ್ಯಾಪ್ತಿಯಲ್ಲಿನ ಪ್ರತಿಯೊಬ್ಬರೂ ಸೇರಿದಂತೆ ರಾಜ್ಯ ಸರ್ಕಾರದ ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಉಧ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಸಾರ್ವಜನಿಕ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿಗಳು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಸ್ಥಳೀಯ ಪಂಚಾಯತ, ಸ್ವಸಹಾಯ ಸಂಘಗಳ ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು, ಸಹಕಾರ ಸಂಘಗಳು, ಉಪ ಅಂಚೆ ಕಛೇರಿಗಳಲ್ಲಿ, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ರೋಜಗಾರ ಸೇವಕರು, ಶಿಕ್ಷಕರು ಸೇರಿದಂತೆ ಎಲ್ಲರನ್ನು ಉತ್ತೇಜಿಸಿ ಸಕ್ರೀಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.