ಪ್ರತಿ ಮನೆಗೆ ಅನ್ನ ಪ್ರಸಾದ ವಿತರಿಸಿ ಮಾನವಿಯತೆ ಮೇರೆದ ಇಷ್ಟಮಲ್ಲಿನಾಥ ಸಮಿತಿ

ವಿಜಯಪುರ, ಮೇ.29-ಕೊರೋನಾ ಕೋವಿಡ ಮಹಾಮಾರಿಯಿಂದ ನಾಡಿನಾದ್ಯಂತ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಇಂತಹ ಸಮಯದಲ್ಲಿ ಇಷ್ಟಮಲ್ಲಿನಾಥ ಸೇವಾ ಸಮಿತಿ ಗೌರವಾಧ್ಯಕ್ಷರು ಲಕ್ಷ್ಮಣ ಶರಣರು ಮತ್ತು ಅದ್ಯಕ್ಷರು ಶರಣಬಸವ ರಾಚಪ್ಪ ಕೋನಳ್ಳಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ ಕಾರ್ಯಕರ್ತರ ಸಹಕಾರದಿಂದ ಇವತ್ತಿಗೆ 18 ದಿನ ಸತತವಾಗಿ ಪ್ರತಿನಿತ್ಯ 200 ಬಡ ಕುಟುಂಬಗಳಿಗೆ ತಾವೇ ಅಡುಗೆ ಮಾಡಿ ಪ್ರತಿ ಮನೆ ಮನೆಗೆ ತೆರಳಿ ಅನ್ನ ಪ್ರಸಾದ ವಿತರಿಸುತ್ತಿದ್ದಾರೆ.
ಸಿದ್ದು ಪತ್ತಾರ, ಸೋಮನಾಥ ಕುಂಬಾರ ಪಾಂಡು ಮೋರೆ, ರಾಜು ಸೋಮನಾಯಕ ಆಕಾಶ ಪವಾರ, ಧರೆಪ್ಪ ಕಿಲಾರೆ ಶಶಿಧರ ಮಹಾಂತೇಶ ಕುಂಬಾರ ಪಟ್ಟಣಶೆಟ್ಟಿ ಉಪಸ್ಥಿತರಿದ್ದು ಈ ಕಾಯಕವನ್ನು ಮುಂದುವರೆಸುತ್ತಿದ್ದಾರೆ.