ಪ್ರತಿ ಮನೆಗೂ ತಲುಪಲಿದೆ ಕಣ್ವ ಪರಿಷತ್: ಮನೋಹರ ಮಾಡಿಗೇರಿ

ಕಲಬುರಗಿ,ಆ 13: ಅಖಿಲ ಭಾರತೀಯ ಶುಕ್ಲಯಜುರ್ವೇದ ಕಣ್ವ ಪರಿಷತ್ ಶತಮಾನದ ಹಿಂದೆ ಸ್ಥಾಪನೆಯಾದ ಸಂಸ್ಥೆ.ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ಕಣ್ವ ಶಾಖೆಯ ಬಾಂಧವರನ್ನು ಸಂಘಟಿಸುವ ಸಲುವಾಗಿ ಕಣ್ವಪರಿಷತ್ ಕಣ್ವರಿರುವ ಪ್ರತಿಯೊಂದು ಜಿಲ್ಲೆ, ತಾಲೂಕು, ಗ್ರಾಮದ ಮನೆ ಮನೆಗಳಿಗೆ ಹೋಗಿ ಸಂಘಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಮನೋಹರ ಮಾಡಿಗೇರಿ ಮಾತನಾಡಿದರು.
ಹೈದರಾಬಾದಿನ ಕಾಚಿಗುಡದ ಶ್ರೀತುಳಜಾ ಭವಾನಿ ಧರ್ಮಶಾಲೆಯಲ್ಲಿ ನಡೆದ ಕಣ್ವ ಪರಿಷತ್ತಿನ ಆಂಧ್ರ ಮತ್ತು ತೆಲಂಗಾಣ ರಾಜ್ಯದ ಅಧಿಕಾರಿಗಳನ್ನು ಆಯ್ಕೆ ಮಾಡಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಣ್ವ ಪರಿಷತ್ತಿನ 9 ಸೂತ್ರಗಳ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ವೇದಪಂಡಿತರಿಗಾಗಿ ಕಣ್ವನಿಧಿ ಸ್ಥಾಪಿಸಲಾಗಿದೆ, ಪರಿಷತ್ತಿನ ಮುಖವಾಣಿಯಾದ ಕಣ್ವ ವಿಕಾಸ ಕನ್ನಡ ಮಾಸಪತ್ರಿಕೆಯನ್ನು ಪುನರಾರಂಭಿಸಲಾಗುವುದು, ಕಣ್ವ ಪರಿಷತ್ತಿನ ವೆಬ್ ಸೈಟಗೆ ಚಾಲನೆ ನೀಡಲಾಗಿದೆ, ಗುರುಪರಂಪರೆಯನ್ನು ಪೆÇ್ರೀತ್ಸಾಹಿಸುವುದಕ್ಕಾಗಿ ಕಣ್ವ ವೇದ ಪಾಠ ಶಾಲೆಗಳನ್ನು ಸ್ಥಾಪಿಸಲಾಗುವುದು. ನಡೆಸಲಾಗುವುದು ಹಾಗೂ ಕಣ್ವ ಮಹಿಳೆಯರನ್ನು ಸಂಘಟಿಸಲು, ಒಗ್ಗೂಡಿಸಲು ಕಣ್ವ ಮಹಿಳಾ ವಿಭಾಗ ಸ್ಥಾಪನೆ ಮಾಡಲಾಗಿದೆ.ಈ ವರ್ಷದ ಅಂತ್ಯದೊಳಗೆ ಕಣ್ವ ಪರಿಷತ್ತಿನ ರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಎಂದರು.ಅಮರೇಶ್ವರ ಅವಧಾನಿ ಅವರನ್ನು ಆಂಧ್ರಪ್ರದೇಶದ ಕಣ್ವ ಪರಿಷತ್ತಿನ ಅಧ್ಯಕ್ಷರನ್ನಾಗಿ ಮತ್ತು ದಿನಕರ್ ಜೋಶಿ ಅವರನ್ನು ತೆಲಂಗಾಣ ರಾಜ್ಯದ ಕಾರ್ಯದರ್ಶಿಯನ್ನಾಗಿ ನಿಯುಕ್ತಿ ಗೊಳಿಸಲಾಯಿತು.
ಅಧಿಕ ಶ್ರಾವಣ ಮಾಸದ ನಿಮಿತ್ತವಾಗಿ ಶ್ರೀ ಸದ್ಗುರು ಘನ ಪಾರಾಯಣ ಸಮಿತಿ ವತಿಯಿಂದ ಪ್ರಪ್ರಥಮ ಬಾರಿಗೆ ಶುಕ್ಲಯಜುರ್ವೇದ ಕಣ್ವ ಶಾಖಾ ಕಂಠಸ್ಥ ಘನ ಪಾರಾಯಣ ಕಾರ್ಯಕ್ರಮವನ್ನು ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ತನ ಉಪಾಧ್ಯಕ್ಷ ಘನಪಾಠಿ ವೇದ ಬ್ರಹ್ಮಶ್ರೀ ಶ್ರೀಕೃಷ್ಣ ಲಕ್ಷ್ಮಿಕಾಂತ ಪುರಾಣಿಕ ಅವರ ನೇತೃತ್ವದಲ್ಲಿ ಜುಲೈ 19 ನಿರಂತರವಾಗಿ ನಡೆದ ಘನ ಪಾರಾಯಣ 40ನೇ ಅಧ್ಯಾಯ ಈಶಾವಾಸ್ಯೊಪನಿಷತ್ತು ಪಾರಾಯಣ ಮಾಡುವುದರ ಮೂಲಕಸಮಾಪ್ತಿಗೊಳಿಸಲಾಯಿತು.
ಬೆಳಿಗ್ಗೆ ಕಣ್ವ ಶಾಖೆಯ ವೈದಿಕ ಸಮ್ಮೇಳನದಲ್ಲಿ ವೈದಿಕ ವೃಂದದಿಂದ ಕಣ್ವ ಶಾಖೆ ಕಂಠಸ್ಥ ಘನ ಪಾರಾಯಣ, ವಿವಿಧ ಗೋಷ್ಠಿ ನಡೆದವು, ಸಾಯಂಕಾಲ ತಾಳ,ಮೇಳ ವಾದ್ಯದೊಂದಿಗೆ ಭವ್ಯ ಶೋಭಯಾತ್ರೆ ಜರುಗಿತು.
ದಕ್ಷಿಣ ವಲಯದ ಅಧ್ಯಕ್ಷ ಆರ್ ಲಕ್ಷ್ಮಿಕಾಂತ್, ಕಾರ್ಯದರ್ಶಿ ಕೆ.ಎನ್ ಚಂದ್ರಶೇಖರ್, ಶಂಕರಭಟ್ ಜೋಶಿ ಅಗಡಿ, ಸಂಜಯ್ ಕುಲಕರ್ಣಿ ಪುಣೆ, ರಾಜ್ಯ ಕಾರ್ಯಧ್ಯಕ್ಷ ಕೋನಕುಂಟ್ಲು ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿವಿನುತ ಜೋಶಿ, ಪ್ರಸನ್ನ ಆಲಂಪಲ್ಲಿ, ತೆಲಂಗಾಣ ರಾಜ್ಯ ಸಂಚಾಲಕ ಭೀಮಸೇನರಾವ್ ಸಿಂಧಗೆರಿ, ಮಹಾರಾಷ್ಟ್ರ ರಾಜ್ಯ ಸಂಚಾಲಕ ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಗೋವಿಂದರಾವ್ ಆಲಂಪಲ್ಲಿ, ಅನಂತ ಕುಲಕರ್ಣಿ ಪುಣೆ,ಸೇರಿದಂತೆ ಆಂಧ್ರ ತೆಲಂಗಾಣ ಮಹಾರಾಷ್ಟ್ರ ಗುಜರಾತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.