ಪ್ರತಿ ಮನೆಗೂ ಉಚಿತ ಮೆಡಿಕಲ್ ಕಿಟ್ ವಿತರಣೆ

ಮೈಸೂರು: ಜೂ.07: ನರಸಿಂಹ ರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಉಚಿತವಾಗಿ ವಾರ್ಡ್ ನಂಬರ್ 35 ರ ವ್ಯಾಪ್ತಿಯ ರಾಘವೇಂದ್ರ ನಗರ ಕಾಲೋನಿಯಲ್ಲಿ ಪ್ರತಿ ಮನೆಗೂ ಮೆಡಿಕಲ್ ಕಿಟ್ ಕೊಡಲಾಯಿತು.
ಸಂಧರ್ಭದಲ್ಲಿ ನಗರ ಭಾ.ಜ.ಪ.ಪ್ರಧಾನ ಕಾರ್ಯದರ್ಶಿ ಗಳಾದ ಗಿರೀಧರ್ ರವರು ಮಾತನಾಡಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕರೋನಾ ಸೋಂಕಿತರು ಇದ್ದು ಕರೋನಾ ನಿರ್ಮೂಲನೆ ಮಾಡಲು ಈ ಕ್ಷೇತ್ರದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಈ ದೃಷ್ಟಿಯಿಂದ ಕ್ಷೇತ್ರದ ಯಾವೊಬ್ಬ ಮನುಷ್ಯನು ಉಪವಾಸದಿಂದ ಇರಬಾರದು ಎಂಬಾ ನಿಟ್ಟಿನಿಂದ ಎಲ್ಲಾ ನಾಗರೀಕರು ಗಳಿಗೆ ಅಹಾರ ಪಡಿತರ ವಿತರಣೆ ಜೋತೆ ಪ್ರತಿ ಮನೆಗೆ ಔಷಧೀಯ ಕಿಟ್ ಕೊಟ್ಟು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬ ನಿಟ್ಟಿನಲ್ಲಿ ಇಂದು ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ನಗರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿಮಂಜು ಮಾತನಾಡಿ ಈ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತ ರು ಹಾಗೂ ಹಿಂದುಳಿದ ವರ್ಗದವರು ವಾಸಿಸುವ ಸ್ಥಳವಾಗಿದ್ದು ಮೈಸೂರು ನಗರ ಕರೋನಾ ಮುಕ್ತ ಮಾಡಲು ಇಂತಹ ಜಾಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳನ್ನು ಅತಿಹೆಚ್ಚು ಮಾಡಿ ಮೈಸೂರು ನಗರವನ್ನು ಕರೋನಾ ಮುಕ್ತ ಪ್ರದೇಶ ಮಾಡಲು ಎಲ್ಲ ಯುವಕರು ಪಣ ತೋಡಬೇಕಾಗಿ ಕೋರಿದರು.
ಈ ಸಂಧರ್ಭದಲ್ಲಿ ಗಿರೀಧರ್, ಜೋಗಿಮಂಜು, ಆನಂದ್,ಗೋಪಾಲ್, ಮಣಿರತ್ನಂ, ಪ್ರಸಾದ್,ವಿಜಯಕುಮಾರ್,ಮುಂತಾದವರು ಇದ್ದರು.