ಪ್ರತಿ ಮನೆಗಳಲ್ಲಿ ತಿರಂಗ ಹಾರಿಸಿ

೭೫ನೇ ಸ್ವಾತಂತ್ರ್ಯ ಸಂಭ್ರಮ

ನವದೆಹಲಿ,ಜು.೨೨- ಸ್ವಾತ್ರಂತ್ರೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ” ಆಗಸ್ಟ್ ೧೩ ಮತ್ತು ೧೫ ರ ನಡುವೆ ಪ್ರತಿ ಮನೆಗಳಲ್ಲಿ “ಹರ್ ಘರ್ ತಿರಂಗ” ಅಭಿಯಾನ ಹಮ್ಮಿಕೊಳ್ಳುವ ಮೂಲಕ ತ್ರಿವರ್ಣ ಧ್ವಜ ಹಾರಾಟ ಅಥವಾ ಪ್ರದರ್ಶಿಸುವಂತೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ..
“ಈ ವರ್ಷ, ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡುತ್ತಿದ್ದು ಇದರ ಅಂಗವಾಗಿ ಹರ್ ಘರ್ ತಿರಂಗಾ ಆಂದೋಲನ ಬಲಪಡಿಸೋಣ. ತ್ರಿವರ್ಣ ಧ್ವಜವನ್ನು ನಿಮ್ಮಮನೆಗಳಲ್ಲಿ ಪ್ರದರ್ಶಿಸಿ ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಪರ್ಕ ಇನ್ನಷ್ಟು ಗಾಢಗೊಳಿಸುವಂತೆ ಮಾಡೋಣ ಎಂದು ಹೇಳಿದ್ದಾರೆ.
೧೯೪೭ ರ ಆಗಸ್ಟ್ ನಲ್ಲಿ ಈ ದಿನ ( ಜು.೨೨) ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿರುವುದರಿಂದ ಭಾರತದ ಇತಿಹಾಸದಲ್ಲಿ ಜುಲೈ ೨೨ ಕ್ಕೆ ವಿಶೇಷ ದಿನ ಎಂದು ಪ್ರಧಾನಿ ಟ್ವಿಟರ್‌ನಲ್ಲಿ ಬಣ್ಣಿಸಿದ್ದಾರೆ.
ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು ಮತ್ತು ಪಂಡಿತ್ ನೆಹರೂ ಅವರು ಬಿಚ್ಚಿಟ್ಟ ಮೊದಲ ತ್ರಿವರ್ಣ ಧ್ವಜದ ವಿವರಗಳನ್ನು ಒಳಗೊಂಡಂತೆ ಇತಿಹಾಸದಿಂದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಅವರು ಹಂಚಿಕೊಂಡಿರುವ ಪ್ರಧಾನಿಯವರು ರಾಷ್ಟ್ರಪ್ರೇಮವನ್ನು ಬಿಂಬಿಸುವಂತೆ ಮನವಿ ಮಾಡಿದ್ದಾರೆ.
ದೇಶ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿರುವಾಗ ಮುಕ್ತ ಭಾರತಕ್ಕಾಗಿ ಧ್ವಜದ ಕನಸು ಕಂಡವರೆಲ್ಲರ ಸ್ಮಾರಕ ಧೈರ್ಯ ಮತ್ತು ಪ್ರಯತ್ನಗಳನ್ನು ಪ್ರಧಾನಿ ಸ್ಮರಿಸಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ತುಂಬುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ರಾಷ್ಟ್ರಗಳು ತಮ್ಮ ಮನೆಗಳಲ್ಲಿ ಮಾರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ರಾಷ್ಟ್ರ ಒಂದು ಗುರುತು:
“ಒಂದು ರಾಷ್ಟ್ರ, ಒಂದು ಗುರುತು- ನಮ್ಮ ತಿರಂಗ! ಸ್ವಾತಂತ್ರ್ಯದ ೭೫ ನೇ ವರ್ಷದಲ್ಲಿ, ನಮ್ಮ ರಾಷ್ಟ್ರಧ್ವಜವನ್ನು ಮನೆಗೆ ತರೋಣ, ಆಗಸ್ಟ್ ೧೩ ರಿಂದ ೧೫ ರವರೆಗೆ ಅದನ್ನು ಹೆಮ್ಮೆಯಿಂದ ಹಾರಿಸೋಣ ಮತ್ತು ಜಗತ್ತಿಗೆ ನ ಒಂದೇ ಎಂದು ತೋರಿಸೋಣ,” ಎಂದು ಸಂಸ್ಕೃತಿ ಸಚಿವಾಲಯ ಟ್ವೀಟ್ ಮಾಡಿದೆ.
‘ಹರ್ ಘರ್ ತಿರಂಗ’ ಅಭಿಯಾನದ ಪ್ರಚಾರದಲ್ಲಿ ಸಕ್ರಿಯ ಪಾತ್ರ ವಹಿಸಲು ಮತ್ತು ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಇತರರನ್ನು ಅವರ ಮನೆಗಳಲ್ಲಿ ಧ್ವಜಾರೋಹಣ ಮಾಡಲು ಪ್ರೋತ್ಸಾಹಿಸುವ ಮೂಲಕ ಅದನ್ನು ಯಶಸ್ವಿಗೊಳಿಸಲು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸಂಬಂಧ ಸಂಸ್ಕೃತಿ ಸಚಿವಾಲಯ ಈ ಸಂಬಂಧ ಎಲ್ಲ ರಾಜ್ಯಗಳಂತೆ ನಿಕಟ ಸಂಪರ್ಕ ಹೊಂದಿರುವುದಾಗಿ ಮೂಲಗಳು ತಿಳಿಸಿವೆ

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆ

ಆಗಸ್ಟ್ ೧೩ ರಿಂದ ೧೫ರ ಅವಧಿಯಲ್ಲಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ಪ್ರಧಾನಿ ಕರೆ

ರಾಷ್ಟ್ರ ಧ್ವಜ ದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಹೇಳಿಕೆ

ಹರ್ ಘರ್ ತಿರಂಗ ಅಭಿಮಾನಕ್ಕೆ ಕರೆ

“ಒಂದು ರಾಷ್ಟ್ರ, ಒಂದು ಗುರುತು- ನಮ್ಮ ತಿರಂಗ

ಆದರೆ ಸಂಸ್ಕೃತಿ ಸಚಿವಾಲಯದಿಂದ ದೇಶಾದ್ಯಂತ ಆಯೋಜನೆ

ರಾಷ್ಟ್ರಪ್ರೇಮವನ್ನು ಬಿತ್ತಲು ಉದ್ದೇಶ