ಪ್ರತಿ ಮಗುವಿಗೂ ಪೋಲಿಯೋ ಲಸಿಕೆ ಹಾಕಿಸಿ-ಕಡಗೋಳ ಚೇತನ

ರಾಯಚೂರು.ಮಾ.೦೪- ನಗರದ ವಾಡ್೯ ನಂ.೧೮ ರ ಖಾದರ್ ಗುಂಡದ ಶಾಲೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಕೆಪಿಸಿಸಿ ಸಯೋಜಕರಾದ ಕಡಗೋಳ ಚೇತನ ಕುಮಾರರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಇಂದಿನಿಂದ ಪಲ್ಸ್ ಪೋಲಿಯೋ ಹಾಕುವ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಲಾಗಿದೆ. ೫ ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಪೋಲಿಯೋ ಲಸಿಕೆ ಹಾಕಬೇಕೆಂದರು.
ಪೋಲಿಯೊ ಲಸಿಕೆಯನ್ನು ಬಡಾವಣೆಯ ೫ವರ್ಷದೊಳಗಿನ ಪ್ರತಿ ಮಗುವಿಗೂ ಹಾಕಬೇಕು ಮತ್ತು ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯರು, ಅಂಗನವಾಡಿ ಕಾರ್ಯಕರ್ತರು, ಬಡಾವಣೆ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.