ಪ್ರತಿ ಭಾರಿ ಲೇಟ್:

ಬಳ್ಳಾರಿ, ಅ.22: ಪಾಲಿಕೆಯ ಸಾಮಾನ್ಯ ಸಭೆ ಪ್ರತಿ ಭಾರಿಯೂ ಲೇಟಾಗಿ ಆರಂಭಗೊಳ್ಳುತ್ತದೆ. ಕಾರಣ ಅನೇಕ. ಹೆಸರಿಗಿ ತಕ್ಕಂತೆ ಕಾರ್ಪೊರೇಷನ್ ಅಲ್ಲವೇ. ನಿಗಧಿತ ಸಮಯಕ್ಕೆ ಅದು ಕೆಲಸನೂ ಮಾಡಲ್ಲ. ಇಂದು 11 ಗಂಟೆಗೆ ಸಾಮನ್ಯ ಸಭೆಯನ್ನು ಜಿಪಂ ಸಭಾಂಗಣದಲ್ಲಿ ಕರೆಯಲಾಗಿತ್ತು.ಆಯುಕ್ತ ರುದ್ರೇಸ್ ಅವರು 11.50 ಕ್ಕೆ ಸಭಾಂಗಣಕ್ಕೆ ಬಂದರೆ ಮೇಯರ್ ಮತ್ತು ಉಪಮೇಯರ್ 12 ಗಂಟೆಗೆ ಬಂದರು. ಆದರೂ ಸಭೆ ಆರಂಭಿಸದೇ ಇದ್ದಾಗ. ಪ್ರತಿ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು ಮೇಯರ್ ಬಂದು ಸೀಟ್ ನಲ್ಲಿ ಕುಳಿತರೂ ಸಭೆ ಆರಂಭಿಸದ ಬಗ್ಗೆ ಆಕ್ಷೇಪ ಎತ್ತಿ.ಸಭೆ ಆರಂಭಿಸುವಂತೆ ಆಗ್ರಹಿಸಿದಾಗ 12.12 ಗಂಟೆಗೆ ಸಭೆ ಆರಂಭಿಸಲಾಯ್ತು. ಆಗಲೂ ಸಭೆಯಲ್ಲಿ  ಮೇಯರ್ ಸೇರಿದಂತೆ ಇದ್ದುದ್ದು  19 ಜನ ಸದಸ್ಯರು ಮಾತ್ರ. ನಂತರ  12.20 ರ ನಂತರ ಒಬ್ಬೊಬ್ಬರಾಗಿ ಸದಸ್ಯರು ಬರತೊಡಗಿದರು.12.30 ಕ್ಕೆ ಶಾಸಕ ಭರತ್ ರೆಡ್ಡಿ ಬಂದಾಗ ಅವರ ಹಿಂದೆ ಕೆಲ ಸದಸ್ಯರು ಬಂದರು.