ಪ್ರತಿ ದೃಶ್ಯ ವ್ಹಾವ್.. ಅನ್ನುವಂತಿದೆ : ಉಪೇಂದ್ರ

ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನ “ಕಬ್ಜ” ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ನಾಳೆ ತೆರೆಗೆ ಬರುತ್ತಿದೆ. ಪ್ರತಿ ದೃಶ್ಯ ವ್ಹಾವ್ ಅನ್ನುವಂತಿದೆ. ದೃಶ್ಯ ವೈಭವ ನೋಡಿದರೆ ಇದನ್ನು ಚಂದ್ರುನಾ ನಿರ್ದೇಶನ ಮಾಡಿರುವುದು ಎನ್ನುವ ಮಟ್ಟಿಗೆ ಬೆರಗಾಗಿದ್ದಾರೆ ನಟ ಉಪೇಂದ್ರ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಉಪೇಂದ್ರ, ಚಿತ್ರದ ಕಥ ಹೇಳಿದಾಗ ಈ ರೇಂಜ್‍ಗೆ ಮಾಡಲು ಸಾಧ್ಯವೇ ಅನ್ನಿಸಿತ್ತು. ಪೊಟೋ ಶೂಟ್‍ನಲ್ಲಿ ಮೊದಲ ಬಾರಿಗೆ ದಂಗಾಗಿ ಬಿಟ್ಟೆ. ಆಗಲೇ ಚಿತ್ರ ದೊಡ್ಡಮಟ್ಟದಲ್ಲಿ ಮೂಡಿಬರಲಿದೆ ಎನ್ನುವುದು ಖಾತ್ರಿಯಾಯಿತು. ಹೀಗಾಗಿ ಆರ್.ಚಂದ್ರು ಏನು ಹೇಳುತ್ತಾರೆ ಅದನ್ನು ಮಾಡಿದ್ದೇನೆ. ಇಡೀ ಚಿತ್ರದ ಶ್ರೇಯ ಚಂದ್ರುಗೆ ಸೇರಬೇಕು.

ಚಿತ್ರದ ಪ್ರತಿಯೊಂದು ಸನ್ನಿವೇಶವೂ ಚಂದ್ರು ಅವರ ಕಲ್ಪನೆ. ಮೇಕಿಂಗ್ ನೋಡಿ ಎಂಜಾಯ್ ಮಾಡಿದ್ದೇನೆ. ಚಿತ್ರಕ್ಕೆ ನಾಲ್ಕು ವರ್ಷ ತೆಗೆದುಕೊಂಡಿತು.ಅದರಲ್ಲಿ ಎರಡು ಲಾಕ್‍ಡೌನ್ ಬಂತು. ಇದರಿಂದ ಚಿತ್ರತಡ ಆಯಿತು.ಆದರೆ ಚಿತ್ರದ ಬಗ್ಗೆ ಕೆಲಸ ಮಾಡಲು ಮತ್ತಷ್ಟು ಸಮಯ ಸಿಕ್ಕಿದರಿಂದ ಚಂದ್ರು ಅತ್ಯುತ್ತಮವಾಗಿ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಚಂದ್ರು ವ್ಯಕ್ತಿ ಅಲ್ಲ ಶಕ್ತಿ ಎನ್ನುವುದು ಸಾಬೀತಾಗಿದೆ. ಜೊತೆಗೆ ಎಜೆ ಕ್ಯಾಮರಾ, ರವಿ ಬಸ್ರೂರು ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಮೇಲಾಗಿ ಚಂದ್ರು ಪ್ರತಿ ದೃಶ್ಯ ಪೋಣಿಸಿದ ರೀತಿ ಚಿತ್ರ ಈ ಮಟ್ಟಕೆ ಹೆಸರು ಮಾಡಲು ಸಾಧ್ಯವಾಗಿದೆ. ಇದು ತಂತ್ರಜ್ಞರ ಸಿನಿಮಾ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಶಿವಣ್ಣ, ಸುದೀಪ್, ಶ್ರೇಯ ಸರಣ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಭಾಗ-2 ಕೂಡ ಬರಲಿದೆ. ಚಿತ್ರ ಪ್ರೇಕ್ಷಕರಿಗೆ ಹಿಡಿಸಲಿದೆ ಎನ್ನುವ ವಿಶ್ವಾಸ ಉಪೇಂದ್ರ ಅವರದು.

ಒಂದು ಪೈಸೆ ಐಡಿಯಾ ನೀಡಿಲ್ಲ

ಕಬ್ಜ ಚಿತ್ರಕ್ಕೆ ಒಂದು ಪೈಸೆಯಷ್ಟು ಐಡಿಯಾ ನೀಡಿಲ್ಲ, ಚಂದ್ರು ಕೆಲಸ ಮಾಡುವ ರೀತಿಗೆ ಮಾರುಹೋಗಿದ್ದೇನೆ.ಕೆಲಸಕ್ಕೆ ಅಡ್ಡಿಯಾಗಬಾರದು ಹೇಳಿದ್ದನ್ನು ಮಾಡಿದ್ದೇನೆ. ಮೇಕಪ್ ಹಾಕಿ ಕುಳಿತರೆ ದಿನವೊಂದಕ್ಕೆ ಎರಡು ಮೂರು ಶಾಟ್ ಮಾತ್ರ ಚಿತ್ರೀಕರಣ ಮಾಡಲಾಗಿದೆ.ಕೆಲವು ದಿನ ಒಂದೇ ಒಂದೇ ಶಾಟ್ ಕೂಡ ಚಿತ್ರೀಕರಣ ಮಾಡಲು ಆಗಿಲ್ಲ. ಕಬ್ಜ ಮೂಲಕ ಚಂದ್ರು ಅದ್ಬುತಲೋಕ ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ  30ರಿಂದ 40 ವರ್ಷದ ಕಥೆ, ಬಹುತೇಕ ಡಾನ್ ಪಾತ್ರ, ಹೇಗಿದ್ದ ಹೇಗಾದ ಎನ್ನುವುದು ಬಲುರೋಚಕ.

ಉಪೇಂದ್ರ ನಟ,

ಕೆಲಸ ಮಾತನಾಡಬೇಕು

ಪ್ರತಿನಿತ್ಯ 200 ರಿಂದ 300ಮಂದಿ  ಜೂನಿಯರ್ ಇರ್ತಾ ಇದ್ರು  .ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಿದರೆ ಸಿನಿಮಾಗೂ ಕೂಡ ಮಾರುಕಟ್ಟೆ ಅಷ್ಟೇ ಪ್ರಮಾಣದಲ್ಲಿ ತಿರುಗುತ್ತೆ ಎನ್ನುವುದು ಕಬ್ಜದಿಂದ ಸಾಬೀತಾಗಿದೆ. ಸಿನಿಮಾ ಹೇಗೆ ಬಂದಿದೆ ಎನ್ನುವುದು ಟ್ರೈಲರ್‍ನಲ್ಲಿಯೇ ಮೂಡಿ ಗೊತ್ತಾಗಿದೆ.ನಾವು ಮಾತನಾಡುವುದಕ್ಕಿಂತ ಕೆಲಸ ಮಾತನಾಡಬೇಕು ಎಂದು ನಟ ಉಪೇಂದ್ರ ಹೇಳಿದರು.

ಕಬ್ಜ ಆಕ್ಷನ್ ಸಿನಿಮಾ, ಜೊತೆಗೆ ಮೇಕಿಂಗ್‍ನಲ್ಲಿ ಮೂಡಿ ಬಂದಿರುವ ಪರಿ ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಕನ್ನಡದ ಸಿನಿಮಾ ಈ ರೀತಿ ಬಂದಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.