ಪ್ರತಿ ತಿಂಗಳು ವೇತನ ಪಾವತಿಗೆ ಸರ್ಕಾರಕ್ಕೆ ಮನವಿ


ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.12:  ಸರ್ಕಾರದ ಹಂತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಿ ಇ ಓ ಗಳ ಕೆಲಸದ ಒತ್ತಡ ಕಡಿಮೆ ಮಾಡಲು ಇನ್ನೊಬ್ಬ ಡಿ ಇ ಓ ನೇಮಕ ಮಾಡಲು ಮತ್ತು ಡಿ ಇ ಓ ಗಳಿಗೆ ಇವಾಗ ತ್ರೈಮಾಸಿಕವಾಗಿ ಆಗುವ ವೇತನ ಬದಲು ಪ್ರತಿ ತಿಂಗಳು ವೇತನ ಪಾವತಿ ಬಗ್ಗೆ ಸರ್ಕಾರಕ್ಕೆ ಮನವಿ  ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ಗಮನಸೆಳೆದಿರುವುದಾಗಿ  ಸಂಘದ ರಾಜ್ಯದ್ಯಕ್ಷರಾದ ಭೀಮರೆಡ್ಡಿ ಪೊಲೀಸ್ ಪಾಟೀಲ್ ತಿಳಿಸಿದರು.
ಪಟ್ಟಣದ ಸರ್ಕಾರಿ ನಿವೃತ್ತ ನೌಕರ ಭವನದಲ್ಲಿ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ಇ ಓಂ  ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯಮಟ್ಟದ ಮುಖಂಡರ ನೇತೃತ್ವದಲ್ಲಿ   ಹಮ್ಮಿಕೊಂಡ ಜಿಲ್ಲಾಮಟ್ಟದ ಸಮಾಲೋಚನಾ ಸಭೆ ಕುರಿತು ಮಾತನಾಡಿದರು.
ನಂತರ ಸದರಿ ಸಭೆಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಕುಂದು ಕೊರತೆಗಳ ಬಗ್ಗೆ ಹಾಗೂ ಸಂಘದಿಂದ ಇಲ್ಲಿವರೆಗೆ ಆಗಿರುವ ಕಾರ್ಯಗಳ ಬಗ್ಗೆ, ಮುಂದೆ ಸಂಘದಿಂದ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ತಾಂತ್ರಿಕ ಸಹಾಯಕರಾದ ಅಶೋಕ್ ಬಿ, ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ಹೆಚ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ಶ್ರೀನಿವಾಸ್, ಜಿಲ್ಲಾ ಖಜಾಂಚಿ ಪತ್ರಿಬಸಪ್ಪ,
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ ಸ್ವತಂತ್ರ ಕುಮಾರ್ , ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ವಿಜಯನಗರ ಜಿಲ್ಲೆಯ ಎಲ್ಲಾ ಕ್ಲರ್ಕ್ ಡಾಟಾ ಎಂಟ್ರಿ ಆಪರೇಟರ್ ಗಳು ಪಾಲ್ಗೊಂಡಿದ್ದರು.