ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯಿಂದ ಪ್ರಶಿಕ್ಷಣ ಕಾರ್ಯಾಗಾರ


ದಾವಣಗೆರೆ.ಸೆ.೫: ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರಶಿಕ್ಷಣ ಕಾರ್ಯಾಗಾರ ನಡೆಸುವ ಮೂಲಕ ಪಕ್ಷವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಘಟಿಸಬೇಕು ಎಂದು ಸತ್ಯನಾರಾಯಣ ರೆಡ್ಡಿ ಮನವಿ ಮಾಡಿದರು.ನಗರದ ಪಿ.ಬಿ ರಸ್ತೆಯಲ್ಲಿರುವ ಪೂಜಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆದ
ಎಸ್ ಟಿ ಮೋರ್ಚಾ ರಾಜ್ಯ  ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ದಾವಣಗೆರೆಯಲ್ಲಿ ಮೂರು ದಿನದ ಎಸ್ಟಿ ಮೋರ್ಚಾದ ಪ್ರಶಿಕ್ಷಣ ತರಬೇತಿ ಉತ್ತಮವಾಗಿ ಮತ್ತು ಶಿಸ್ತು ಬದ್ದವಾಗಿ ನಡೆದಿರುವುದು ಬಹಳ ಸಂತೋಷದ ವಿಚಾರ. ಪ್ರತಿಯೊಂದು ವ್ಯವಸ್ಥೆ ಅಚ್ಚುಕಟ್ಟಾಗಿತ್ತು ಮುಂದಿನದಿನದಲ್ಲಿ ಎಲ್ಲಾ ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡಲಾಗುವುದು ಎಂದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎಸ್ಟಿ ಜನಾಂಗಕ್ಕೆ ಯಾವುದೇ ಸೌಲಭ್ಯ ನೀಡದೇ, ಹಾದಿ ತಪ್ಪಿಸಿದವರು ಈಗ ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೆ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.ಬಿಜೆಪಿ ರಾಷ್ಟ್ರೀಯತೆ ಭಾವದಿಂದ ನಡೆಯುತ್ತಿರುವ ಪಕ್ಷ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೋದಿಯವರ ಆಡಳಿತದಿಂದ ಲೋಕಸಭಾ ಚುನಾವಣೆಯಲ್ಲಿ ವಿರೋಧ   ಪಕ್ಷಕ್ಕೆ ಅಭ್ಯರ್ಥಿಗಳು ಸಿಗದಂತಾಗುತ್ತಿದೆ. ದಾವಣಗೆರೆಯಲ್ಲಿ ಅದೇ ಸ್ಥಿತಿ ಇತ್ತು. ವಿಧಾನ ಸಭಾ ಚುನಾವಣೆಯಲ್ಲೂ ಅಭ್ಯರ್ಥಿಗಳು ಸಿಗದ ಸ್ಥಿತಿ ವಿಪಕ್ಷಗಳಿಗೆ ಬರಲಿದೆ ಎಂದರು.ಕಾರ್ಯಕ್ರಮದಲ್ಲಿ   ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್ ,ರಾಜ್ಯ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಎಸ್ ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಓಲೇಕಾರ  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದಬಿ.ಎಸ್ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸ್ಕರಿಯಪ್ಪ ,ಎಸ್ಟಿಮೋರ್ಚಾ ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್ ಮತ್ತಿತರರಿದ್ದರು.