ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ವಸಹಾತು ನಿರ್ಮಾಣಕ್ಕೆ ಸಲಹೆ

ಬೆಂಗಳೂರು, ಜ.೮-ರಾಜ್ಯದಲ್ಲಿ ಕೈಗಾರಿಕೆಗಳ ಏಳಿಗೆ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿ ಪಡಿಸುವಂತೆ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕೆಎಸ್‌ಎಸ್‌ಐಡಿಸಿ ಗಳಿಗೆ ಸೂಚನೆ ನೀಡುವಂತೆ ಕಾಸಿಯಾ ರಾಜ್ಯ ಸರ್ಕಾರ ಮನವಿ ಮಾಡಿದೆ.

ಕಾಸಿಯಾ ಸಂಸ್ಥೆಯಿಂದ ನಿರ್ಮಾಣ ಹಂತದಲ್ಲಿರುವ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಸಂಶೋಧನೆ ಮತ್ತು ಪರೀಕ್ಷಾ ಕೇಂದ್ರ ಹಾಗೂ ಕೌಶಲಾಭಿವೃದ್ಧಿ ಕೇಂದ್ರ ಇನ್ನಿತರ ಕಾಮಗಾರಿಗಳಿಗೆ ರೂ. ೩೩.೦೧ ಕೋಟಿ ಅಂದಾಜಿಸಲಾಗಿರುತ್ತದೆ. ಸದರಿ ಯೊಜನೆಯನ್ನು ಪೂರ್ಣಗೊಳಿಸಲು ಕಾಸಿಯಾಗೆ ಹೆಚ್ಚುವರಿಯಾಗಿ ರೂ. ೧೦.೦೦ ಕೊಟಿ ರೂ. ಗಳ ಅನುದಾನವನ್ನು ಮಂಜೂರು ಮಾಡಲು ಮನವಿ ಮಾಡಿದ್ದಾರೆ

ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಯೋಜನಾ ಮಂಡಳಿಯ ಪ್ರಥಮ ಸಭೆಯಲ್ಲಿ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ
ಮನವಿ ಮಾಡಿದ್ದಾರೆ

ಜಿಲ್ಲೆಗಳ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಎಂಎಸ್‌ಎಂಇ ಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯಾಭಿವೃದ್ಧಿ ಉನ್ನತೀಕರಣ ನಿಧಿ
ಖಾಸಗಿ ಕೈಗಾರಿಕಾ ಪ್ರದೇಶದಲ್ಲಿ ಶೇ. ೯೨ ರಷ್ಟು ಎಂಎಸ್‌ಎಂಇ ಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಾಭಿವೃದ್ಧಿ ಸೌಲಭ್ಯಗಳನ್ನು ಉನ್ನತೀಕರಣಗೊಳಿಸುವ ಅಗತ್ಯತೆ ಇದೆ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಖಾಸಗಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ೫೦೦ ಕೋಟಿ ರೂ. ಗಳನ್ನು ವಿಶೇಷವಾಗಿ ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.

ಕೌಶಲ ರಹಿತ ನಿರುದ್ಯೋಗಿ ಯುವಕರಿಗೆ ಕೈಗಾರಿಕೆಗಳಲ್ಲಿ ಇನ್-ಪ್ಲಾಂಟ್ ತರಬೇತಿ ನೀಡುವ ಮತ್ತು ಉದ್ಯೋಗ ಖಾತರಿ ನಿಡುವ ಬಗ್ಗೆ
ಎಂಎಸ್‌ಎಂಇ ವಲಯದಲ್ಲಿ ವಿವಿಧ ಕ್ಷೇತ್ರದಲ್ಲಿ ನುರಿತ ಕೌಶಲ ಹೊಂದಿದ ಅಭ್ಯರ್ಥಿಗಳ ಕೊರತೆಯಿದ್ದು, ಅವುಗಳನ್ನು ಪರಿಹರಿಸಿ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಖಾತರಿ ಭರವಸೆಯನ್ನು ಹೊಂದಿದ ಯೋಜನೆಯನ್ನು ಸಾಕಾರಗೊಳಿಸಲು ಹಾಗೂ ಎಸ್.ಎಸ್.ಎಲ್.ಸಿ , ಪಿಯುಸಿ,ಐ.ಟಿ.ಐ ಉತ್ತೀರ್ಣರಾದ , ಅನುತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ವಿವಿಧ ಕೈಗಾರಿಕೆಗಳಲ್ಲಿ ಇನ್-ಹೌಸ್ ತರಬೇತಿ ನೀಡಿ ಕೌಶಲನುರಿತರನ್ನಾಗಿ ಮಾಡಿ ನಂತರ ಅವರುಗಳಿಗೆ ಉದ್ಯೋಗ ಖಾತರಿ ನೀಡುವ ವ್ಯವಸ್ಥೆಯನ್ನು ರೂಪಿಸಲು ಕಾಸಿಯಾ ಸಂಸ್ಥೆ ಉತ್ಸುಕವಾಗಿದೆ ಎಂದಿದ್ದಾರೆ

ಎಂಎಸ್‌ಎಂಇ ಒಂದು ಲಕ್ಷ ನಿರುದ್ಯೋಗಿ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ನೇಮಕ ಮಾಡಿಕೊಳ್ಳಲು ಅನುವು ಮಾಡಿ ಕೊಡಲಾಗುವುದು. ಸದರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಸರ್ಕಾರದ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ೨೫,೦೦೦ ನಿರುದ್ಯೋಗಿ ಯುವಕರಿಗೆ ೫,೦೦೦ ಭತ್ಯೆಯಂತೆ ೬ ತಿಂಗಳ ತರಬೇತಿಗೆ ಒಟ್ಟು ೭೫.೦೦ ಕೋಟಿ ರೂ. ಗಳ ಅವಶ್ಯಕತೆ ಇರುತ್ತದೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.