ಪ್ರತಿ ಗ್ರಾ.ಪಂ.ನಲ್ಲೂ ಗೃಹಲಕ್ಷ್ಮಿ ಯೋಜನೆ:ಡಿಕೆಶಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೯:ಪ್ರತಿಯೊಂದು ವಾರ್ಡ್, ಬೂತ್ ಹಾಗೂ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೧೩೬ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಕ್ಕಾಗಿ ತಮ್ಮನ್ನು ಮೆಂಟಲ್ ಎಂದು ಕೆಲವರು ಕರೆದಿದ್ದ ಕ್ಷಣವನ್ನು ಅವರು ಮೆಲುಕು ಹಾಕಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ೮೨ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಗ್ಯಾದ ಲಕ್ಷ್ಮಿ ಬಾರಮ್ಮ ಹಾಡನ್ನು ಹಾಡಿದರು. ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಅದರ ನೇರ ಪ್ರಸಾರ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಪಂಚಾಯ್ತಿಯಲ್ಲೂ ಗೃಹಲಕ್ಷ್ಮಿ ಕಾರ್ಯಕ್ರಮ ಆಯೋಜಿಸುತ್ತೇವೆ. ಬೆಂಗಳೂರಿನಲ್ಲಿ ೧೯೮ ರಿಂದ ೨೦೦ ಕಡೆಗಳಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಹೇಳಿದರು.ಚುನಾವಣಾ ಸಂದರ್ಭದಲ್ಲಿ ೧೩೬ ಸೀಟುಗಳು ಬರಲಿದೆ ಎಂದು ಹೇಳಿದ್ದಕ್ಕಾಗಿ ತಮ್ಮನ್ನು ಮೆಂmಲ್ ಎಂದು ಕರೆದಿದ್ದರು. ಇನ್ನೂ ಕೆಲವರು ನಾವೇ ಸರ್ಕಾರ ರಚಿಸುತ್ತೇವೆ ಎಂಬುದಾಗಿ ಕೆಲವರ ಕಾಲಿಗೆ ಬಿದ್ದಿದ್ದರು.ಆದರೆ,ಅವರ ಹೆಸರನ್ನು ಪ್ರಸ್ತಾಪಿಸಲು ನಿರಾಕರಿಸಿದ ಅವರು, ಸಮ್ಮಿಶ್ರ ಸರ್ಕಾರ ಮಾಡುತ್ತೇವೆ ಎಂದು ಬರೆದುಕೊಂಡಿದ್ದರು. ಆದರೆ, ತಾವು ಮಾತ್ರ ೧೩೬ ಸೀಟುಗಳಿಗೆ ಬದ್ಧನಾಗಿದ್ದೆ ಎಂದು ಹೇಳಿದರು.ಸೋನಿಯಾಗಾಂಧಿ ಅವರು ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಕೇಳಿದ್ದರು. ನಾನೇ ಹೊಲ ಉತ್ತು ಗೊಬ್ಬರ ಹಾಕಿದ್ದೇನೆ.ಈ ಕಾರಣದಿಂದ ನನಗೆ ಗೊತ್ತು ಎಂದು ಉತ್ತರಿಸಿದ್ದೆ.ಕೆಲವೊಂದು ಕ್ಷೇತ್ರದಲ್ಲಿ ನಮ್ಮಿಂದ ತಪ್ಪಾಗಿದೆ. ೨೨೪ ಕ್ಷೇತ್ರಗಳ ಪೈಕಿ ೨೧೫ ಸೀಟು ಹಂಚಿಕೆ ಒಮ್ಮತದ ಪ್ರಕಾರವೇ ಆಗಿದೆ.ಪಕ್ಷಕ್ಕಾಗಿ ಕೆಲವು ಹಿರಿಯರು ತ್ಯಾಗ ಮಾಡಿದ್ದಾರೆ ಎಂದರು.ಮಾಟ-ಮಂತ್ರದಿಂದ ಸರ್ಕಾರ ರಚನೆಮಾಡಿದ್ದೇವೆ ಎಂದು ವಿಪಕ್ಷ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ.ಅವರ ಹೆಸರು ಪ್ರಸ್ತಾಪಿಸದೆ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಕ್ವಿಟ್ ಇಂಡಿಯಾ ಮಾದರಿ ಚಳವಳಿ ಅಗತ್ಯವಿದ್ದು, ಅಂದು ಬ್ರಿಟಿಷರ ವಿರುದ್ಧ ನಾವು ಹೋರಾಟ ಮಾಡಿದ್ದೆವು. ಇಂದು
ಕೋಮುವಾದ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿ ಬಿಜೆಪಿ ಮುಕ್ತ ಭಾರತ ಮಾಡಬೇಕಾಗಿದೆ ಎಂದು ಕರೆ ಕೊಟ್ಟರು.