ಪ್ರತಿ ಗ್ರಾಮಕೊಂದು ಘನ ತ್ಯಾಜ್ಯ ವಿಲೇವಾರಿ ಘಟಕ

ಸಾಸ್ವೆಹಳ್ಳಿ.ಮಾ.೨೯; ಪ್ರತಿ ಗ್ರಾಮಕೊಂದು ಘನ ತ್ಯಾಜ್ಯ ವಿಲೇವಾರಿ ಘಟಕ ಇದ್ದರೆ ಆ ಗ್ರಾಮ ಸ್ವಚ್ಚ ಮತ್ತು ಆರೋಗ್ಯ ಪೂರ್ಣ ಗ್ರಾಮವಾಗುವುದರಲ್ಲಿ ಎರಡು ಮಾತಿಲ್ಲ, ಗ್ರಾಮವಷ್ಟೆ ಅಲ್ಲ ಗ್ರಾಮದ ಸುತ್ತಮುತ್ತಲಿನ ಪರಿಸರವನ್ನು ಆರೋಗ್ಯವಾಗಿ ಇಡುವಲ್ಲಿ ಪ್ರಮುಖ ಪಾತ್ರವಹಿಸಲಿವೆ ಈ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸಾಸ್ವೆಹಳ್ಳಿ ಮತ್ತು ಕುಳಗಟ್ಟೆ ಗ್ರಾಮಗಳ ಹೊರಹೊಲಯದಲ್ಲಿ  ಗ್ರಾಪಂನ ಸ್ವಚ್ಚ ಸಂಕೀರ್ಣ ಯೋಜನೆ ಅಡಿ ಘನತ್ಯಾಜ ಸಂಪನ್ಮೂಲ ನಿರ್ವಹಣಾ ಘಟಕಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ ನಗರ ಪಟ್ಟಣಗಳಿಗಷ್ಟೆ ಅಲ್ಲ ಗ್ರಾಮಗಳಿಗೂ ಘನತ್ಯಾಜ್ಯ ವಿಲೆವಾರಿ ಘಟಕಗಳು ಅವಶ್ಯವಿದ್ದು, ಹೋಬಳಿಯ ಪ್ರತಿ ಗ್ರಾಪಂಗಳಲ್ಲು ಇಂತಹ ಘಟಕಗಳನ್ನು ನಿರ್ಮಾಣ ಮಾಡಲು ಸ್ಥಳ ನಿಗದಿಮಾಡಲು ಸಂಬAದ ಪಟ್ಟ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು. ಇದೇ ಸಮಯದಲ್ಲಿ ಕುಳಗಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಹೆಚ್ಚುವರಿ ಕೊಠಡಿಗಳನ್ನು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷರಾದ ಕೆ.ಎಲ್.ರಂಗಪ್ಪ, ಕೆಎಸ್‌ಡಿಎಲ್ ನಿರ್ದೇಶಕರಾದ ಶಿವು ಹುಡೇದ್, ಎಪಿಎಂಸಿ ನಿರ್ದೇಶಕರಾದ ಜಿ.ವಿ.ಎಂ.ರಾಜು, ಸಾಸ್ವೆಹಳ್ಳಿ ಗ್ರಾಪಂ ಅಧ್ಯಕ್ಷರಾದ ಸುಧಾ.ಎಸ್.ಲೋಕೇಶ್ವರಪ್ಪ, ಉಪಾಧ್ಯಕ್ಷರಾದ ಶಾಂತಕೃಷ್ಣಮೂರ್ತಿ, ಸದಸ್ಯರಾದ ಸವಿತಾರಮೇಶ್, ಕುಳಗಟ್ಟೆ ಗ್ರಾಪಂ ಅಧ್ಯಕ್ಷರಾದ ಚಂದ್ರಮ್ಮಪ್ರಕಾಶ್, ಪಿಡಿಒ ಪರಮೇಶ್ ಕೊಳ್ಳೂರ್, ಭಾರತಿ, ಪಿಡಬ್ಯುಡಿ ಇಲಾಖೆಯ ಎಇ ಶಿವರಾಮ್, ಬಿಆರ್‌ಪಿ ಜಿ.ಕೆ.ಅರುಣುಕುಮಾರ್ ಉಪಸ್ಥಿತರಿದ್ದರು.ಸಾಸ್ವೆಹಳ್ಳಿ ಗ್ರಾಮದÀ ಹೊರಹೊಲಯದಲ್ಲಿ ಭಾನುವಾರ ಗ್ರಾಪಂನ ಘನತ್ಯಾಜ ಸಂಪನ್ಮೂಲ ನಿರ್ವಹಣಾ ಘಟಕದ ಶಂಕುಸ್ಥಾಪನೆಯನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೆರವೇರಿಸಿದರು, ತಾಪಂ ಉಪಾಧ್ಯಕ್ಷರಾದ ಕೆ.ಎಲ್.ರಂಗಪ್ಪ, ಕೆಎಸ್‌ಡಿಎಲ್ ನಿರ್ದೇಶಕರಾದ ಶಿವು ಹುಡೇದ್, ಎಪಿಎಂಸಿ ನಿರ್ದೇಶಕರಾದ ಜಿ.ವಿ.ಎಂ.ರಾಜು, ಸಾಸ್ವೆಹಳ್ಳಿ ಗ್ರಾಪಂ ಅಧ್ಯಕ್ಷರಾದ ಸುಧಾ.ಎಸ್.ಲೋಕೇಶ್ವರಪ್ಪ, ಉಪಾಧ್ಯಕ್ಷರಾದ ಶಾಂತಕೃಷ್ಣಮೂರ್ತಿ, ಸದಸ್ಯರಾದ ಸವಿತಾರಮೇಶ್, ಕುಳಗಟ್ಟೆ ಗ್ರಾಪಂ ಅಧ್ಯಕ್ಷರಾದ ಚಂದ್ರಮ್ಮಪ್ರಕಾಶ್, ಪಿಡಿಒ ಪರಮೇಶ್ ಕೊಳ್ಳೂರ್, ಭಾರತಿ, ಪಿಡಬ್ಯುಡಿ ಇಲಾಖೆಯ ಎಇ ಶಿವರಾಮ್, ಬಿಆರ್‌ಪಿ ಜಿ.ಕೆ.ಅರುಣುಕುಮಾರ್ ಉಪಸ್ಥಿತರಿದ್ದರು.