ಪ್ರತಿ ಕ್ವಿಂಟಾಲ್ ತೊಗರಿಗೆ 8,000 ಬೆಲೆ ನೀಡಲು ಆಗ್ರಹ

ಆಳಂದ:ಜ.2:ತಾಲೂಕಿನಾದ್ಯಂತ ಈಗಾಗಲೇ ತೊಗರಿ ಕಟಾವು ನಡೆಯುತ್ತಿದ್ದು, ಕೆಲವು ಕಡೆ ರಾಶಿ ಕೂಡಾ ಪ್ರಾರಂಭಗೊಂಡಿವೆ. ಆದರೆ ಇದುವರೆಗೂ ಸರ್ಕಾರ ತೊಗರಿ ಖರೀದಿ ಕೆಂದ್ರ ಸ್ಥಾಪಿಸದೆ ಇರೋದು ವಿಪರ್ಯಾಸ. ಕೂಡಲೇ ತೊಗರಿ ಖರೀದಿ ಕೆಂದ್ರ ತೆರೆದು ರೈತರಿಗೆ ನ್ಯಾಯಯುತ ಬೆಲೆ ಕೊಡಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಸಾಮಾಜಿಕ ಹೋರಾಟಗಾರರಾದ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದ ಅವರು ಡಾ.ಎಮ್.ಎಸ್.ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸಿನಂತೆ ಪ್ರತಿ ಕ್ವಿಂಟಾಲ್ ತೊಗರಿಗೆ 8,000 ಬೆಲೆ ನಿಗದಿ ಮಾಡಬೇಕು.ಹೊರ ದೇಶದ ತೊಗರಿ ಖರೀದಿ ಕೈ ಬೀಡಬೇಕು. ರೈತರು ಬೆಳೆದ ಸಂಪೂರ್ಣ ತೊಗರಿ ಖರೀದಿ ಮಾಡಬೇಕು. ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ 2,000 ಪ್ರೋತ್ಸಾಹ ಬೆಂಬಲ ಬೆಲೆ ಘೋಷಿಸಬೇಕು. ಅತಿವೃಷ್ಟಿಯಿಂದ ನೊಂದ ರೈತರಿಗೆ ತೊಗರಿ ಪ್ರೋತ್ಸಾಹ ಬೆಲೆ ಹೆಚ್ಚಿಸಿ ಅನುಕೂಲವಾಗುವಂತೆ ನೋಡಿಕೋಳ್ಳಬೇಕು.ಒಟ್ಟಾರೆ ತೊಗರಿ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕೈಗೋಳ್ಳಬೇಕೆಂದು ಸಾಮಾಜಿಕ ಹೋರಾಟಗಾರರಾದ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.