ಪ್ರತಿಷ್ಠೆ ಬಿಡಿ, ಚರ್ಚೆ ನಡೆಸಿ, ಸಮಸ್ಯೆ ಪರಿಹರಿಸಿ


ಬೆಂಗಳೂರು, ಏ.೧೨- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯನ್ನು ಸರ್ಕಾರ ಖಾಸಗೀಕರಣ ಮಾಡುವ ಆಲೋಚನೆ ಇದ್ದರೆ ಕೂಡಲೇ ಕೈಬಿಡಬೇಕು ಎಂದು ಹೇಳಿರುವ ಕೆಪಿಸಿಸಿ ಕಾರ್ಯಾದ್ಯಕ್ಷ ಮತ್ತು ಮಾಜಿ ಸಾರಿಗೆ ಸಚಿವರು ಆಗಿರುವ ರಾಮಲಿಂಗಾ ರೆಡ್ಡಿ ಅವರು ಪ್ರತಿಷ್ಠೆ ಬಿಟ್ಟು ನೌಕರರ ಜೊತೆ ಮಾತುಕತೆ ನಡೆಸಿ ಎಂದು ಒತ್ತಾಯಿಸಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಸಾಧ್ಯವಾಗುವುದಿಲ್ಲ ಎಂದು ನೇರವಾಗಿ ಹೇಳಿ ಅದನ್ನು ಬಿಟ್ಟು ಮಾಡೋಣ ನೋಡೋಣ ಎಂದು ಹೇಳಿಕೆ ನೀಡುತ್ತಿರುವುದು ಇಂತಹ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದರು
ಇನ್ನೋರ್ವ ಸಾರಿಗೆ ಇಲಾಖೆಯ ಮಾಜಿ ಸಚಿವ ಎಚ್‌ಎಂ ರೇವಣ್ಣ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಸಾರಿಗೆ ನೌಕರರಿ?ಗೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಂದೆಯಿದ್ದಂತೆ ನೌಕರರು ಮಕ್ಕಳಿದ್ದಂತೆ. ಅವರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಾನು ಕೂಡ ನಾಲ್ಕು ವರ್ಷಗಳ ಕಾಲ ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದೇನೆ ಆಗಲು ನೌಕರರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸಿದ್ದರು ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೆವು ಎಂದು ಅವರು ಹೇಳಿದರು
ರಾಜ್ಯ ಸಾರಿಗೆ ಬಸ್ ಗಳು ಖಾಸಗಿ ಬಸ್‌ಗಳ ರೀತಿ ಅಲ್ಲ. ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಲಾಭ ಬರಲಿ ನಷ್ಟ ಆಗಲಿ ಜನರ ಸೇವೆಗೆ ನಿತ್ಯ ಬಳಕೆಯಾಗುತ್ತವೆ ಆದರೆ ಖಾಸಗಿಯವರು ಆಗಲ್ಲ ಲಾಭವೆಂದರೆ ಮಾತ್ರ ಓಡಿಸುವುದು ರಾಜ್ಯ ಸರ್ಕಾರ ರಸ್ತೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಉದ್ದೇಶ ಇದ್ದರೆ ಕೂಡಲೇ ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾರಿಗೆ ಇಲಾಖೆ ಶೇಕಡ ೮೦ ರಷ್ಟು ಲಾಭ – ನಷ್ಟ ಅನ್ನುವ ನಿಯಮದಲ್ಲಿ ಸಂಚಾರ ಮಾಡುತ್ತವೆ ಕೆಲವೊಮ್ಮೆ ನಷ್ಟದಲ್ಲಿ ಇರುತ್ತದೆ. ಹೀಗಿರುವಾಗ ಸಾರಿಗೆ ನೌಕರರ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಹಠಮಾರಿತನ ಧೋರಣೆ ಪ್ರದರ್ಶಿಸುತ್ತಿರುವ ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಾಗದಿದ್ದರೆ ಆರನೇ ವೇತನ ಆಯೋಗ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ನೌಕರರನ್ನು ಕರೆದು ಅವರಿಗೆ ಸ್ಪಷ್ಟವಾಗಿ ಹೇಳಬೇಕು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು ಎಂದು ಅವರು ತಿಳಿಸಿದ್ದಾರೆ
ರಾಜ್ಯದಲ್ಲಿ ಹಠಮಾರಿ ಮುಖ್ಯಮಂತ್ರಿ ಮತ್ತು ಅನನುಭವಿ ಸಾರಿಗೆ ಸಚಿವರಿಂದ ಇಂತಹ ಸಮಸ್ಯೆ ಎದುರಾಗಿದೆ ಎಂದು ದೂರಿದ ಅವರು ನೌಕರರನ್ನು ಕೆಲಸಕ್ಕೆ ಕರೆದುಕೊಳ್ಳಲು ಎಸ್ಮಾ ಜಾರಿ ಮಾಡುತ್ತೇವೆ ಎಂದು ಹೇಳುವುದು ಮೂರ್ಖತನದ ಪರಮಾವಧಿ ಎಂದು ತಿಳಿಸಿದ್ದಾರೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಚಿವ ಈಶ್ವರಪ್ಪ ಅವರ ಇಲಾಖೆಯಲ್ಲಿನ ಅನುದಾನ ಹಂಚಿಕೆ ಮಾಡಲು ಸಮಯ ಇದೆ ಆದರೆ ಸಾರಿಗೆ ಸಂಸ್ಥೆಯ ನೌಕರರ ವಿಚಾರದಲ್ಲಿ ಅವರನ್ನು ಕರೆದು ಚರ್ಚೆ ಮಾಡಲು ಸಮಯವಿಲ್ಲ ಎಂದು ದೂರಿದರು.
ಕೋವಿಡ್ ಹೆಚ್ಚಳ
ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನನಿತ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ.
ಸೋಂಕು ನಿರ್ವಹಣೆ ಮಾಡುವ ಬದಲು ರಾಜ್ಯ ಸರ್ಕಾರ ಮುಖ್ಯಮಂತ್ರಿ ಸೇರಿದಂತೆ ಸಚಿವರು ಉಪಚುನಾವಣೆಯಲ್ಲಿ ಬಿಜಿಯಾಗಿದ್ದಾರೆ ಅವರ ನಿರ್ಲಕ್ಷದಿಂದಾಗಿ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ