ಪ್ರತಿಷ್ಠಾನ ಉದ್ಘಾಟನೆ


ಚನ್ನಮ್ಮನ ಕಿತ್ತೂರ-12 ನಾವು ಆಡುವ ಮಾತು, ನಡೆದಾಡುವ ಪತ್ರಿಯೊಂದು ಸಂದರ್ಭಗಳು ಸಮಾಜವನ್ನು ಮುನ್ನಡೆಸುವ ರೀತಿಯಲ್ಲಿ ಬದುಕು ಇರಬೇಕು ಅಂತ ತೋರಿಸಿಕೊಟ್ಟವರು ಬಸವಲಿಂಗಯ್ಯಾ ಹಿರೇಮಠ ಎಂದು ಹಿರಿಯ ರಂಗಭೂಮಿ ಮತ್ತು ಚಿತ್ರನಟ ಮಂಡ್ಯ ರಮೇಶ ಹೇಳಿದರು.
ಸಮೀಪದ ಬೈಲೂರ ಗ್ರಾಮದಲ್ಲಿ ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಹಮ್ಮಿಕೊಂಡಿದ್ದ ಪ್ರಥಮ ಪುಣ್ಯಸ್ಮರಣೆ ಪ್ರತಿಷ್ಠಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಮಠರವರು ದೇಶದಲ್ಲಿ ಗಾನಗಾರುಡಿಗರೆಂದೆ ಖ್ಯಾತಿಯಾದವರು. ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕೌಟಗಿಮಠ ಮಾತನಾಡಿ ಹಾಡಿನ ಮೂಲಕ ಜನಪದ ಸಾಹಿತ್ಯ ಸಮಾಜದಲ್ಲಿ ಸೇವೆ ಸಲ್ಲಿಸಿದವರು ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿ ಕಲೆ ಸಾಹಿತ್ಯ ಉಳಿಸುವ ಕೆಲಸ ಮಾಡಿದವರು ಬಸವಲಿಂಗಯ್ಯನವರು ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಬೈಲೂರಿನ ನಿಷ್ಕಳ ಮಂಟಪದ ನಿಜಗುಣಾನಂದ ಸ್ವಾಮಿಜೀ ಈ ಭಾಗದ ಕಲಾವಿದರಿಗೆ ಮತ್ತು ಮಕ್ಕಳಿಗೆ ಹಿರೇಮಠರವರ ಪ್ರತಿಭೆ ಗುರುತಿಸುವ ಕಾರ್ಯ ಪ್ರತಿ ವರ್ಷ ಮುಂದೊರೆಯಬೇಕು. ಅಂದಾಗ ಮಾತ್ರ ಅವರ ಪುಣ್ಯಸ್ಮರಣೆ ಹಮ್ಮಿಕೊಂಡಿದ್ದು ಸಾರ್ಥಕವಾಗುತ್ತದೆ ಇಂತಹ ಕಾರ್ಯಗಳಿಗೆ ಎಲ್ಲರೂ ಬದ್ಧರಾಗಬೇಕೆಂದು ಬಯಸಿದರು.
ತತ್ವಪದಕಾರರು ಡಾವಣಗೇರಿ ಯುಗಧರ್ಮ ರಾಮಣ್ಣಾ, ಪಾರಿಜಾತ ಕಲಾವಿದೆ ಕಮಲವ್ವ ಜಾನಪ್ಪಗೋಳ ಮೆಟ್ಟಗುಡ್ಡ ಇವರುಗಳಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಾಹಿತಿ ಡಾ. ಬಾಳಣ್ಣಾ ಶೀಗಿಹಳ್ಳಿ ‘ಶ್ರೀಕೃಷ್ಣ ಪಾರಿಜಾತ’ ‘ಸಂಗ್ಯಾ-ಬಾಳ್ಯಾ’ ಪುಸ್ತಕ ಬಿಡುಗಡೆ ಮಾಡಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಸಾನಿಧ್ಯ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಕಲ್ಮಠ ಕಿತ್ತೂರ ವಹಿಸಿದ್ದರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರೋ. ಎನ್,ಎಸ್.ಗಲಗಲಿ, ವಿಶ್ವೇಶ್ವರಿ ಹಿರೇಮಠ, ವೀರೇಶ ಕಂಬಳಿ, ರಾಜು ಕುಡಸೋಮಣ್ಣವರ, ಚನ್ನಬಸಪ್ಪ ಮೊಕಾಶಿ, ನಿಜಲಿಂಗಯ್ಯಾ ಹಿರೇಮಠ, ನಾಗಭೂಷಣ ಹಿರೇಮಠ, ಸಂಗಮೇಶ ಹಿರೇಮಠ, ವಿವೇಕ ಕುರಗುಂದ, ಕಲ್ಲಪ್ಪ ಕುರಗುಂದ, ನಾಗೇಶ ಬೆಣ್ಣಿ, ಮಹೇಶ ಕಂಬಳಿ, ನಂದಾ ಗುಳೇದಗುಡ್ಡ, ಮಾರುತಿ ಮಂಡಾನಿ, ಅನಿಲ ಮೇತ್ರಿ ಇತರರಿದ್ದರು.