ಪ್ರತಿಯೋಬ್ಬರು ಕೋವಿಡ್ ನಿಯಮ ಪಾಲಿಸಬೇಕು

ಜಗಳೂರು.ಏ.೨೭; ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ, ಅರೋಗ್ಯ ಇಲಾಖೆಯ ಸಿಬ್ಬಂದಿ,ಆಶಾ,ಅಂಗನವಾಡಿ ಕಾರ್ಯಕರ್ತರು ಮೊದಲು ತಮ್ಮ ಆರೋಗ್ಯಕ್ಕೆ ಒತ್ತು ನೀಡಿದರೆ ನೀವು ಆರೋಗ್ಯವಾಗಿದ್ದಾರೆ ಇತರರ ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ ಎಂದು ತಾಲೂಕು ಪಂಚಾಯಿತಿ ಇಓ ಮಲ್ಲಾನಾಯ್ಕ ಹೇಳಿದರು. ತಾಲೂಕಿನ ತೊರಣಗಟ್ಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಚೌಡಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಮಟ್ಟದ ಟಾಸ್ಕ್ ಪೋಸ್ 9 ಕಮಿಟಿ ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿ,ಕೋವಿಡ್ ನ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಶವ ಸಂಸ್ಕಾರ ಮಾಡಲು ಸಹ ಸ್ಥಳ ದೊರೆಯದಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿ ಗ್ರಾಮಗಳಿಗೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ . ಹಾಗಾಗಿ ಪ್ರತಿಯೋಬ್ಬರು ಕೋವಿಡ್ ನಿಯಮಗಳನ್ನು ಪಾಲಿಸಬೇಕು.ಹಬ್ಬ ಆಚರಣೆಗಳನ್ನು ಸ್ವಲ್ಪದಿನ ಮುಂದುಡಿ ಬೇರೆ ಊರಿನಿಂದ ಬಂದವರಿಗೆ ಸೋಂಕು ಇದ್ದರೆ ಅವರಿಯಿಂದ ನಿಮಗೆ ಹರಡುತ್ತದೆ ಇದರಿಂದ ಇಡೀ ಗ್ರಾಮಕ್ಕೆ ಸೋಂಕು ಹರಡಲಿದೆ ಎಂದರು.ಗ್ರಾಮೀಣ ಮಟ್ಟದಲ್ಲಿ ರಚಿಸಿರುವ ಕಮೀಟಿಯವರು ನಮ್ಮ ಊರಿಗೆ ಕೋರೋನಾ ಬರುವುದೇ ಬೇಡ ಎಂಬ ಶಪತಮಾಡಿ ಹಗಲಿರಿಳು ಶ್ರಮಿಸಬೇಕು.ಗ್ರಾಮಗಳಲ್ಲಿರುವ ಚರಂಡಿ ಗಳನ್ನು ಶುಚಿಗೋಳಿಸಬೇಕು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಹೇಳಿದರು.
ಪಿಡಿಓ ಮರುಳು ಸಿದ್ದಪ್ಪ ಮಾತನಾಡಿ ಕೋರೋನ ನಿಯಂತ್ರಣಕ್ಕೆ ತರಲು ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು ಸಮೀತಿಯವರ ಜೋತೆಗೆ ಪ್ರತಿಯೋಬ್ಬರ ಸಹಕಾರ ಅತೀಮುಖ್ಯವಾಗಿದ್ದು ಜಾಗೃತಿ ಮೂಡಿಸುವ ಜವಬ್ದಾರಿ ಯಾಗಿದೆ ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ವನ್ನು ಯಶಸ್ವಿಗೋಳಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಕಲ್ಲೇದೆವರಪುರ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಉಮೇಶ್ ಮಾತನಾಡಿ ಎರಡನೇ ಅಲೆ ಸ್ಪೋಟಗೊಳ್ಳುತ್ತಿದ್ದು ಸಾವಿನ ಸಂಖ್ಯೆಯಲ್ಲಿ ಹೆಚ್ಚಾಳವಾಗುತ್ತಿದೆಹಾಗಾಗಿ ಸೋಂಕಿತರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಪಟ್ಟಿ ಮಾಡಿ ಅವರನ್ನು ಕೋವಿಡ್ ಪರಿಕ್ಷೇಗೆ ಒಳಪಡಿಸಬೇಕಾಗಿದೆ. ಶೇ.70 ರಷ್ಟು ಸೋಂಕಿನ ಲಕ್ಷಣಗಳಿಲ್ಲದಿದ್ದರು ಸಹ ಸೋಂಕು ತಗಲಿರುತ್ತಾದೆ ಹಾಗಾಗಿ ಪ್ರತಿಯೋಬ್ಬರು ಪರಿಕ್ಷೇ ಮಾಡಿಸಿಕೋಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಎ.ಡಿ.ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೌಡಮ್ಮ, ಕಾರ್ಯದರ್ಶಿ ಸತೀಶ್, ಗ್ರಂಥಪಾಲಕ ಬಾಲಕೃಷ್ಣ, ಸ್ವಯಂ ಸೇವಕ ಬಡಪ್ಪ, ಗ್ರಾ.ಪಂ ನ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಹಾಜರಿದ್ದರು.