ಪ್ರತಿಯೊಯೊಬ್ಬರು ವಿಶ್ವ ಶಾಂತಿಗಾಗಿ ಮನಸ್ಸನ್ನು ಸದೃಡಗೊಳಿಸಬೇಕುಃ ಜಿ.ಎಸ್. ಕುಲಕರ್ಣಿ

ವಿಜಯಪುರ, ಸೆ.24-ಪ್ರಸ್ತುತ ವಿಶ್ವದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಬಯೋತ್ಪಾದನೆ, ಅಸಹಿಷ್ಣೂತೆ ಹೆಚ್ಚಾಗಿದ್ದು ಅಶಾಂತಿಯುತಾಂಡವವಾಡುತ್ತಿದೆ. ವಿಶ್ವದ ಪ್ರತಿಯೊಯೊಬ್ಬ ನಾಗರಿಕರು ವಿಶ್ವ ಶಾಂತಿಗಾಗಿ ತಮ್ಮ ಮನಸ್ಸನ್ನು ಸದೃಡಗೊಳಿಸಬೇಕು ಹಾಗೂ ಅದರಂತೆ ಕಾರ್ಯಪ್ರವರ್ತರಾಗಬೇಕು ಎಂದುವಿಜಯಪುರ ರೋಟರಿ ಕ್ಲಬ್ ಅಧ್ಯಕ್ಷರಾದ ರೊಟೆರಿಯನ್ ಜಿ.ಎಸ್. ಕುಲಕರ್ಣಿ ಹೇಳಿದರು.
ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರೊಟರಿ ಕ್ಲಬ್ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ‘ವಿಶ್ವ ಶಾಂತಿ ದಿನಾಚರಣೆ’ಯನ್ನು ಉದ್ದೇಶಿಸಿ ಮಾತನಾಡಿ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಹೋದರತೆ, ಪರಸ್ಪರ ಸಹಕಾರ ಮನೊಭಾವವನ್ನು ಅಳವಡಿಸಿಕೊಂಡು ಸದೃಡ ದೇಶವನ್ನು ನಿರ್ಮಿಸಬೇಕು ಎಂದರು
ಅತಿಥಿಗಳಾಧ ಇಮಾಮ ಬಿ. ಹುಲ್ಲೂರ ರವರು ಮಾತನಾಡಿ ವಿಶ್ವದಲ್ಲಿ ಮಾನವ ಜನಾಂಗವು ಒಂದೇ ಜಾತಿ ಧರ್ಮದ ಬೆನ್ನು ಹತ್ತಿ ಶಾಂತಿಗೆ ದಕ್ಕೆ ತರುವಂತೆ ಆಗಿದೆ. ನಮ್ಮ ಜಾತಿ ದರ್ಮದ ಜೊತೆಗೆ ಇತರ ಜಾತಿ ದರ್ಮಗಳನ್ನು ಗೌರವಿಸಿದಾಗ ಪರಸ್ಪರತ ಪ್ರೀತಿ ಉಂಟಾಗಿ ಶಾಂತಿಯಿಂದ ಇರಬಹುದು ಎಂದರು.
ಅಧ್ಯಕ್ಷರಾದ ಪ್ರಾಚಾರ್ಯ ಶ್ರೀ ಶರದ್ ರೋಡಗಿಯವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗಳು ಶಾಂತಿಯನ್ನು ಕಾಪಾಡಲು ಬದ್ದರಾಗಬೇಕು ಹಾಗೂ ಶಾಂತಿ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದೆ. ಅದಕ್ಕಾಗಿ ವಿಧ್ಯಾರ್ಥಿಗಳು ಎನ್.ಎಸ್.ಎಸ, ಎನ್.ಸಿ.ಸಿ ಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುವದರ ಮೂಲಕ ಸಹೋದರತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಬಿಪ್ರಾಯಟ್ಟರು
ಇದೆ ಸಂದರ್ಬದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊಟೆರಿಯನ್ ಜಿ.ಎಸ್. ಕುಲಕರ್ಣಿ ವಿಶ್ವ ಶಾಂತಿಯ ಸಂದೇಶವನ್ನು ಹಾಗೂ ಪ್ರಮಾಣವಚನವನ್ನು ಬೋಧಿಸಿದರು ಹಾಗೂ ಸುಮಾರು 300 ಬಲೂನುಗಳನ್ನು ಆಕಾಶಕ್ಕೆ ಬಿಡುವುದರ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರ ಯಶಸ್ವಿಗೊಳಿಸಿದರು.
ಈ ಸಮಾರಂಭದಲ್ಲಿ ಬೋಧಕ, ಬೋಧೇಕೆತರ ಸಿಬ್ಬಂದಿ ಹಾಗೂ ವಿದ್ಯಾಥಿಗಳು ಉಪಸ್ಥಿತರಿದ್ದರು.