ಪ್ರತಿಯೊಬ್ಬ ವಿದ್ಯಾರ್ಥಿ ಹಿಂದೆ ಗುರುಗಳ ಆಶೀರ್ವಾದವಿರುತ್ತದೆ ನ್ಯಾ. ದೇಸಾಯಿ

ನವಲಗುಂದ, ಸೆ 12: ತಮ್ಮ ಅಪಾರ ಶಿಷ್ಯ ಬಳಗಕ್ಕೆ ಜ್ಞಾನವನ್ನು ನೀಡಿದ ಶಿಕ್ಷಕರ ಗುರುವಂದನೆ ನೋಡುವ ಕಾರ್ಯಕ್ರಮ ನನ್ನ ಜೀವನದಲ್ಲಿ ಸುವರ್ಣ ಅವಕಾಶವೆಂದು ತಿಳಿದುಕೊಳ್ಳುತ್ತೇನೆಂದು ರಾಜ್ಯ ನ್ಯಾಯಾಲಯದ ನ್ಯಾಯಾಧೀಶರಾದ ಪದ್ಮರಾಜ ಎನ್. ದೇಸಾಯಿ ಅವರು ಹೇಳಿದರು.
ಅವರು ಪಟ್ಟಣದ ಮಾಡೆಲ್ ಹೈಸ್ಕೂಲ್ ಶಾಲೆಯ 1986-87 ನೇ ಸಾಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಶಿಕ್ಷಕರ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಸಾಧನೆ ಮಾಡುವಂತಹ ಶಕ್ತಿ ಇರುತ್ತದೆ. ಅವರವರ ಕ್ಷೇತ್ರದಲ್ಲಿ ವೈದ್ಯರು, ವಕೀಲರು, ವ್ಯಾಪಾರಿ, ಕೃಷಿಕನಾಗಿ ಸಾಧನೆ ಮಾಡಿರುತ್ತಾರೆ. ಅವರ ಹಿಂದೆ ಗುರುಗಳ ಆಶೀರ್ವಾದ ಇರುತ್ತದೆ ಅಂತಹ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಬೆಂಗಳೂರು ಸೃಜನಶೀಲ ಅದ್ಯಾಪನ ಕೇಂದ್ರದ ಮುಖ್ಯಸ್ಥರು, ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರಜಗಿ, ರಾಜ್ಯ ಗುಪ್ತವಾರ್ತೆ ಡಿ.ವಾಯ್.ಎಸ್.ಪಿ ಎಲ್.ವೈ.ಶಿರಕೋಳ, ಹಳೆಯ ವಿದ್ಯಾರ್ಥಿ ಸಿದ್ದಲಿಂಗೇಶ ಹಂಡಗಿ ಮಾತನಾಡಿದರು.
ಮಾಡೆಲ್ ಬಾಯ್ಸ ಹೈಸ್ಕೂಲ್ ಗುರುಗಳಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಎಮ್.ಪಟ್ಟಣಶೆಟ್ಟಿ, ಉಷಾ ಮಡಿ, ನಿವೃತ್ತ ಶಿಕ್ಷಕರಾದ ಎನ್.ಎಚ್.ಪುರಾಣಿಕ, ವಿ.ಎನ್.ಪತಕಿ, ಆರ್.ಬಿ.ಕಮತರ,ಎಮ್.ಬಿ.ಮುಲ್ಲಾನವರ, ಕೆ.ಜಿ. ಸದರಜೋಶಿ, ಎಸ್.ಎ.ಬಾರಕೇರ, ಎಸ್.ಬಿ.ತೋಟಿ ಮತ್ತಿತರರಿದ್ದರು.