ಪ್ರತಿಯೊಬ್ಬ ವಿದ್ಯಾರ್ಥಿಗಳು ಅವಿಷ್ಕಾರ ಗೀಳು ಹಿಡಿಸಿಕೊಳ್ಳಿ : ಪ್ರೊ. ದಯಾನಂದ ಅಗಸರ

ಬೀದರ:ಸೆ.19: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಕಾಲೇಜು ವತಿಯಿಂದ ನಡೆದ ಮೂರು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಸಂಭ್ರಮದ ತೆರೆ ಕಂಡಿತು.

ಗುಲಬರ್ಗಾ ವಿ.ವಿ. ಕುಲಪತಿಗಳಾದ ಪೆÇ್ರ. ದಯಾನಂದ ಅಗಸರ ಅವರು ಸಮಾರೋಪ ನುಡಿಗಳನ್ನಾಡುತ್ತ “ವಿಜ್ಞಾನ ಮತ್ತು ತಂತ್ರಜ್ಞಾನ ಏಳ್ಗೆಗೆ ಶರೀರಶಾಸ್ತ್ರ ಮತ್ತು ರಸಾಯನಶಾಸ್ತ್ರ ಮೂಲ ಕಾರಣವಾಗಿದೆ. ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಜ್ಞಾನ ಪಡೆದು ವಿಜ್ಞಾನಿಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಯುವಕರು ಕೇವಲ ವೈಯಕ್ತಿಕ ಭವಿಷ್ಯಕ್ಕಾಗಿ ಬಳಸಿಕೊಳ್ಳದೆ ರಾಷ್ಟ್ರನಿರ್ಮಾಣಕ್ಕಾಗಿ ಬಳಸಿಕೊಳ್ಳಬೇಕು. ಯುವ ವಿಜ್ಞಾನಿಗಳು ಅವಿಷ್ಕಾರದ ಹುಚ್ಚು ಹಿಡಿಸಿಕೊಳ್ಳಬೇಕು. ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಮತ್ತು ಗೀಳಿನಿಂದ ದ ಏನಾದರೂ ಹೊಸ ಅವಿಷ್ಕಾರ ಮಾಡಲು ಸಾಧ್ಯ. ಗೀಳಿನಿಂದ ಅವಿಷ್ಕರಿಸುವ ವಿಜ್ಞಾನಿಗೆ ಆಕಾಶವೂ ಸನಿಹವಾಗುತ್ತದೆ. ವಿದ್ಯಾರ್ಥಿಗಳು ಚಿಕ್ಕ ಆವಿಷ್ಕಾರದಿಂದ ತೃಪ್ತಿಪಡದೆ ನಿರಂತರತೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿ.ವಿ. ಕುಲಪತಿ ಡಾ.ಕೆ.ಸಿ. ವೀರಣ್ಣ ಮಾತನಾಡಿ “ಮಾತೃಭಾಷೆ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಆಯೋಜನೆ ಮಾಡಿದ್ದು ಅನುಭವಕ್ಕೆ ಸನಿಹವಾಗಿದೆ. ವಿಜ್ಞಾನಿಗಳು ಮಾಡುವ ಸಂಶೋಧನೆ ಸಾರ್ವಜನಿಕರಿಗೆ ಅನುಕೂಲವಾಗುವಂತಿರಬೇಕು. ಕೇವಲ ಪದವಿಗಾಗಿ ಸಂಶೋಧನೆ ಮಾಡದೆ ನಿರಂತರ ಹೊಸ ಅವಿಷ್ಕಾರ ಮಾಡಬೇಕು. ವಿಫಲತೆಯನ್ನು ಧನಾತ್ಮಕವಾಗಿ ತೆಗೆದುಕೊಂಡು ಮುನ್ನುಗ್ಗಬೇಕು. ಮೂರು ದಿನಗಳ ಸಮ್ಮೇಳನದಲ್ಲಿ ವಿವಿಧ ವಿಷಯಗಳ 6 ಅಧಿವೇಶನ ನಡೆದಿವೆ. ಪರಸ್ಪರ ಜ್ಞಾನ ವಿನಿಮಯವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.

ಕರಾಶಿ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶಟಕಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ್ ಪಾಟೀಲ, ಕಾರ್ಯದರ್ಶಿ ಸಿದ್ರಾಮ ಪಾರಾ, ಜ್ಞಾನಸುಧಾ ವಿದ್ಯಾಲಯ ಅಧ್ಯಕ್ಷೆ ಪೂರ್ಣಿಮಾ ಜಿ, ಗುಲಬರ್ಗಾ ವಿವಿ ವಿಶ್ರಾಂತ ಕುಲಪತಿ ಪೆÇ್ರ. ಬಿ.ಜಿ. ಮೂಲಿಮನಿ, ಪ್ರಾಚಾರ್ಯ ಡಾ. ಎಂ.ಎಸ್.ಚೆಲ್ವಾ, ಡಾ. ಜಗನ್ನಾಥ ಹೆಬ್ಬಾಳೆ, ಪೆÇ್ರ. ರಾಜೇಂದ್ರ ಬಿರಾದಾರ ಉಪಸ್ಥಿತರಿದ್ದರು.

ಕ.ವಿ.ತಂ. ರಾಜ್ಯ ಸಂಯೋಜಕ ಮಹಾದೇವೇಗೌಡ ನಿರೂಪಿಸಿದರು. ಡಾ. ಎಂ.ಎಸ್.ಚೆಲ್ವಾ ಸ್ವಾಗತಿಸಿದರು. ಇದೇ ವೇಳೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು