ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ “ತನ್ನ ಬೂತ್ ಕೊರೋನಾ ಮುಕ್ತ- ಲಸಿಕೆ ಯುಕ್ತ-ರೋಗ ಮುಕ್ತ”ಮಾಡಲು ಅಂಬಾರಾಯ ಅಷ್ಠಗಿ ಕರೆ

ಕಲಬುರಗಿ:ಮೇ.30: ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ತನ್ನ ಬೂತ್ ಕೋರೊನಾ ಮುಕ್ತ , ಲಸಿಕೆ ಯುಕ್ತ ಹಾಗೂ ರೋಗ ಮುಕ್ತ ಮಾಡಲು ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಶಕ್ತಾನುಸಾರ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಕರೆ ನೀಡಿದರು. ಕಲಬುರಗಿ ತಾಲೂಕಿನ
ಕೋಟನೂರ (ಡಿ) ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಆವರಣದಲ್ಲಿ ಭೋಧಿವೃಕ್ಷ ಸಸಿಗಳನ್ನು ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು 7 ವರ್ಷ ಪೂರೈಸಿದ ಪ್ರಯುಕ್ತ “ಸೇವೆಯೆ ಸಂಘಟನೆ 2.0” ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕರಿಗೆ ಮಾಸ್ಕ, ಸಾನಿಟೈಸರ ಮತ್ತು ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅಷ್ಠಗಿ, ಈಡಿ ಪ್ರಪಂಚ ಕೋರೊನಾ ಎಂಬ ಮಹಾಮಾರಿಯನ್ನು ತೋಲಗಿಸಲು ಹೋರಾಡುತ್ತಿದೆ.ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿ ಕೋಂಡಿದ್ದಾರೆ, ನಾವೆಲ್ಲರೂ ಇದರ ಸದುಪಯೋಗ ತೆಗೆದುಕೊಂಡು ದೇಶವನ್ನು ಕೊರೋನಾ ಹಾಗೂ ಬ್ಯ್ಲಾಕ ಫಂಗಸ ಮುಕ್ತ ಮಾಡಲು ಸಂಕಲ್ಪ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿಚಂದ್ರ ಕಾಂತಿಕರ್, ಬಿಜೆಪಿ ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ದೇವೇಂದ್ರ ಸಿನ್ನುರ್,ಪ್ರಧಾನ ಕಾರ್ಯದರ್ಶಿ ದಿನೇಶ್ ದೊಡ್ಡಮನಿ, ಬಿಜೆಪಿ ಯುವ ಮುಖಂಡರಾದ ಮಂಜುರೆಡ್ಡಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ, ಮುಖಂಡ ತುಕಾರಾಮ ರಾಮಪೂರೆ,ರಾಜು ನೂಲಕರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಉಪಸ್ಥಿತರಿದ್ದರು.