ಪ್ರತಿಯೊಬ್ಬ ಪ್ರಜೆಯೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು

ಗದಗ, ಮೇ 24: ಗದಗ ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗದಗ ಹಾಗೂ ಮೆ. sಸಿ. ಎಸ್. ಆಯ್ ಬಾಸೆಲ್ ಮಿಶನ್ ಆಸ್ಪತ್ರೆ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮೆ. ಸಿ.ಎಸ್.ಐ. ಬಾಸೆಲ್ ಮಿಶನ್ ಆಸ್ಪತ್ರೆಯಲ್ಲಿ ಪರಿಸರಕ್ಕೆ ಪೂರಕವಾದ ಜೀವನ ಶೈಲಿಗೆ ಸಾಮೂಹಿಕ ಪೆÇ್ರೀತ್ಸಾಹ ಎಂಬ ವಿಷಯದ ಕುರಿತು ತಿಳುವಳಿಕೆ ಕಾರ್ಯಕ್ರಮವನ್ನು ಮೆ sಸಿ.ಎಸ್.ಆಯ್‍ಬಾಸೆಲ್‍ಮಿಸನ್ ಆಸ್ಪತ್ರೆಯ ಅಧಿಕಾರಿ ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿತ್ತು.
ಪರಿಸರ ಅಧಿಕಾರಿ ಶೋಭಾ ಪೆÇೀಳ ಅವರು ಮಾತನಾಡಿ ಪರಿಸರದಲ್ಲಿ ಪ್ರತಿಯೊಂದು ಜೀವಿಗಳಿಗೂ ತನ್ನದೇ ಆದ ಬದುಕು ಕಟ್ಟಿಕೊಳ್ಳುವ ಉದ್ದೇಶ ಇರುತ್ತದೆ. ಪ್ರತಿಯೊಬ್ಬ ಪ್ರಜೆಯೂ ಸಹ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಮ್ಮ ಆಸ್ಪತ್ರೆಯಲ್ಲಿಯೇ ಬೇರ್ಪಡಿಸಿ ವಿವಿಧ ಬಣ್ಣಗಳಿಂದ ಕೂಡಿದ ಡಸ್ಟ್‍ಬಿನ್ ಗಳಲ್ಲಿ ಹಾಕುವುದರಿಂದ ವಿಲೇವಾರಿ ಘಟಕದ ಸಿಬ್ಬಂದಿಗಳಿಗೆ ಅನುಕೂಲವಾಗುತ್ತದೆ. ಗಿಡಮರಗಳನ್ನು ನಾವು ಪೆÇೀಷಿಸಿ ಬೆಳೆಸಬೇಕು. ಜಲ ಮೂಲ ಸ್ಥಳಗಳನ್ನು ಮಾಲಿನ್ಯ ಮಾಡದೇ ಅತ್ಯಮೂಲ್ಯ ಜಲ ಸಂಪತ್ತನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು/ನರ್ಸಿಂಗ್ ಸಿಬ್ಬಂಧಿಗಳು ಹಾಗೂ ಪ್ರಾದೇಶಿಕ ಕಛೇರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗದವರು ಪರಿಸರ ಸಂರಕ್ಷಣೆ ಕುರಿತು ಪರಿಸರವನ್ನು ರಕ್ಷಿಸಲು ದೈನಂದಿನ ಜೀವನದಲ್ಲಿ ಸಾಧ್ಯವಿರುವ ಎಲ್ಲಾ ಬದಲಾವಣೆಗಳನ್ನು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ನೀರಿನ ಮಿತ ಬಳಕೆ, ಇಂಧನ ಉಳಿತಾಯ, ಸುಸ್ಥಿತ ಆಹಾರ ಪದ್ಧತಿ ಅಳವಡಿಕೆ, ಆರೊಗ್ಯಯುತ ಜೀವನ ಶೈಲಿ ಅಳವಡಿಕೆ , ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಜಯರಾಜ್ ವಹಿಸಿದ್ದರು. ಲೆಕ್ಕಾಧಿಕಾರಿ ಶ್ರೀಮತಿ ಲೀನಾಲಂಕಾ ಇವರು ಉಪಸ್ಥಿತರಿದ್ದರು ಸುನಿಲ ವಂದಿಸಿದರು.