ಪ್ರತಿಯೊಬ್ಬ ನಾಗರೀಕರು ಸಂವಿಧಾನ ಜಾಗೃತಿ ಜಾಥದಲ್ಲಿ ಪಾಲ್ಗೊಳ್ಳಬೇಕು

ಚಿಂಚೋಳಿ,ಫೆ.13- ದೇಶದ ಸಂವಿಧಾನ ಜಾರಿಯಾಗಿ 75 ವರ್ಷಗಳು ಗತಿಸಿದ ನಿಮಿತ್ಯವಾಗಿ ಕರ್ನಾಟಕ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಂಡು ಸಂವಿಧಾನದ ಅಂಶಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮದ ಮೂಲ ಉದ್ದೇಶ.
ಇಡೀ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥ ಆಯಾ ಜಿಲ್ಲೆಗಳಿಂದ ಪ್ರಾರಂಭಗೊಂಡು ತಾಲ್ಲೂಕಾ ಮತ್ತು ಗ್ರಾಮ ಪಂಚಾಯತ್‍ಗಳವರೆಗೆ ಜಾಥ ನಡೆಯುತ್ತಿದೆ ಈ ಸಂವಿಧಾನ ಜಾಗೃತಿ ಜಾಥ ಸಮಾಜದ ಪ್ರತಿಯೊಂದು ಧರ್ಮ ಜಾತಿಯವರಿಗೆ ಅರಿವು ಮೂಡಿಸಿತಕ್ಕಂತಹ ಕಾರ್ಯಕ್ರಮವಾಗಿದೆ. ಆದರೆ ಸೂಕ್ಷ್ಮವಾಗಿ ಈ ಜಾಥವನ್ನು ಸಮೀಪದಿಂದ ಗಮನಿಸಿದಾಗ ಅಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು, ದಲಿತ ಮಹಿಳೆಯರು, ಯುವಕರು, ದಲಿತ ಮುಖಂಡರು ಹಾಗೂ ತಮಟೆ ಬಾರಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ.
ಸಂವಿಧಾನ ಪಿತಾಮಹ ಡಾ. ಬಿ.ಆರ್ ಅಂಬೇಡ್ಕರ ರವರು ದಲಿತರಾದರೆ ಅವರು ರಚಿಸಿದ ಸಂವಿಧಾನ ಈ ದೇಶದ ಎಲ್ಲಾ ಧರ್ಮಿಯರು ಜಾತಿಯವರಿಗೆ ಅನ್ವಯಿಸುವ ಸಂವಿಧಾನವಾಗಿದೆ. ಈ ಸಂವಿಧಾನ ಕೇವಲ ದಲಿತರಿಗೆ ಮಾತ್ರ ಸೀಮಿತವಾದ್ದದಲ್ಲ ಇದು ಸಮಾಜದಲ್ಲಿಯ ಪ್ರತಿಯೊಬ್ಬ ನಾಗರೀಕರು ತಿಳಿದು ಸಂವಿಧಾನ ಜಾಗೃತಿ ಜಾಥದಲ್ಲಿ ಭಾಗವಹಿಸಿ ಸಂವಿಧಾನದಲ್ಲಿಯ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಸಮಾಜ ಸೇವಕರದ ರಮೇಶ್ ಯಾಕಾಪೂರ ಅವರು ಪತ್ರಿಕಾಗೋಷ್ಟಿ ವಿವರಿಸಿದರು.