ಪ್ರತಿಯೊಬ್ಬರ ರಕ್ಷಣೆ ಸರ್ಕಾರದ ಹೊಣೆ ಸಿವಿಲ್ ನ್ಯಾಯಾಧೀಶ ವಡವಡೆ ಅಭಿಮತ

ಕಾನೂನು ಸೇವಾ ದಿನ ಆಚರಣೆ
ದೇವದುರ್ಗ.ನ.೧೧-ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ರಕ್ಷಣೆ ಸರ್ಕಾರದ ಕರ್ತವ್ಯವಾಗಿದ್ದು, ದುರ್ಬಲ ವ್ಯಕ್ತಿಯನ್ನು ಸಹ ಸಂವಿಧಾನದಡಿ ಸಮಾನವಾಗಿ ನೋಡಿಕೊಳ್ಳಲಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಬಾಳೆ ಸಾಬ್ ವಡವಡೆ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ, ತಾಪಂ ಸಹಯೋಗದಲ್ಲಿ ಪಾನ್ ಇಂಡಿಯಾ ಕಾನೂನು ಜಾಗೃತಿ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿ ಇಚ್ಚೆಗೆ ಮಾತನಾಡಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ನ್ಯಾಯದಿಂದ ವಂಚಿತನಾಗಬಾರದೆಂಬ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದವರು, ಮಹಿಳೆ, ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರು ಸೇರಿ ಸರ್ವರಿಗೂ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಯನ್ನು ಒದಗಿಸಲು ೧೯೮೭ರಲ್ಲಿ ಪ್ರಾಧಿಕಾರ ರಚನೆಯಾಗಿರ. ಕೆಳ ನ್ಯಾಯಾಲಯದಿಂದ ಶ್ರೇಷ್ಠ ನ್ಯಾಯಾಲಯದವರೆಗೂ ಉಚಿತ ಅರಿವು ಮತ್ತು ನೆರವು ನೀಡಲಾಗುತ್ತಿರ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಕೆಂದು ಕರೆ ನೀಡಿದರು.
ವಕೀಲ ಮರಿಲಿಂಗ ಕೋಳೂರು ಕಾನೂನು ಸೇವಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ್ ಶ್ರೀನಿವಾಸ ಚಾಪಲ್, ಹಿರಿಯ ವಕೀಲರಾದ ಬಸನಗೌಡ ದೇಸಾಯಿ, ಅಮರೇಶ ಪಾಟೀಲ್, ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಕೋಲ್ಕರ್ ಅಧ್ಯಕ್ಷತೆವಹಿಸಿದ್ದರು. ಎಇ ಮಲ್ಲಿಕಾ ಮಿತ್ರ, ವಕೀಲರ ಸಂಘದ ಕಾರ್ಯದರ್ಶಿ ತಾಯಪ್ಪ ನಾಯಕ, ವಕೀಲ ವಿ.ಎಂ.ಮೇಟಿ, ವೆಂಕಟೇಶ ಚವ್ಹಾಣ್, ಟಿಎಚ್‌ಒ ಡಾ.ಬನದೇಶ್ವರ, ನಾಗರತ್ನ ಇತರರಿದ್ದರು.